ಧರ್ಮದ ಉದ್ಧಾರಕ್ಕಾಗಿ ಶಂಕರಾಚಾರ್ಯರು ಜಾಗೃತಿ ಮೂಡಿಸಿದರು: ವಿಧುಶೇಖರ ಶ್ರೀ

Jun 27, 2022, 2:09 PM IST

ಬೆಂಗಳೂರು (ಜೂ. 27): ಶೃಂಗೇರಿ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ (Vidhushekhar Swamiji) ರಾಜ್ಯ ಪ್ರವಾಸ ಕೈಗೊಂಡಿದ್ದು, ಅರಮನೆ ಮೈದಾನದಲ್ಲಿ ಗುರುವಂದನೆ ಕಾರ್ಯಕ್ರಮ (Guruvandane)  ಅಯೋಜಿಸಲಾಗಿತ್ತು. ಸಾವಿರಾರು ಭಕ್ತರು ಶ್ರೀಗಳ ಆಶೀರ್ವಾದ ಪಡೆದರು. ಡಿಕೆಶಿ, ಅಶ್ವತ್ಥ್ ನಾರಾಯಣ್, ಸುಧಾಕರ್ ಸೇರಿದಂತೆ ಗಣ್ಯರು ಕೂಡಾ ಭಾಗವಹಿಸಿದ್ದರು. 

ಶೃಂಗೇರಿ ಶಾರದಾ ಮಠ ಪೀಠಾಧ್ಯಕ್ಷರ ಸನ್ನಿಧಿಯಲ್ಲಿ Soundarya Lahari Parayana

ಮನುಷ್ಯರಿಗೆ ಭಗವಂತ ಐಶ್ವರ್ಯ, ಅಧಿಕಾರ ನೀಡಿದಾಗ ಅಹಂ ಪಡದೆ ಜನಸಾಮಾನ್ಯರೊಂದಿಗೆ ಬೆರೆತಾಗ ದೇವರ ರಕ್ಷೆ ತಮಗೆ ದೊರೆಯುವಂತಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಮಹಾಸ್ವಾಮಿ ತಿಳಿಸಿದರು.

ಭಗವಂತನ್ನು ಸ್ಮರಣೆ ಮಾಡುತ್ತಾ, ಜೀವನ ಸಾಗಿಸಿದಾಗ ಅಹಂಕಾರ, ನೀಚ ಬುದ್ದಿಯಂತಹ ವಿಚಾರಗಳು ತಲೆಯಲ್ಲಿ ಬರುವುದಿಲ್ಲ. ಶೃಂಗೇರಿ ಶಾರದಾ ಪೀಠ ಗುರು-ಶಿಷ್ಯರ ಮಠವಾಗಿದ್ದು, ಪಾರಂಪರಿಕವಾಗಿ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗೆ ಸದಾ ಶ್ರಮಿಸುತ್ತಿದೆ. ಶಾರದಾಂಬೆಯ ಆಶೀರ್ವಾದವು ಎಲ್ಲಾ ಸದ್ಭಕ್ತರಿಗೆ ಸದಾ ಇರುತ್ತದೆಯೆಂದು ತಿಳಿಸಿದರು.