Apr 12, 2022, 8:50 PM IST
ಬೆಂಗಳೂರು (ಏ. 12): ಗುತ್ತಿಗೆದಾರ ಸಂತೋಷ್ ಪಾಟೀಲ್ (contractor santosh Patil ) ಆತ್ಮಹತ್ಯೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ (Former Chief Minister HD Kumaraswamy) ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವವರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿ ಆತ್ಮಹತ್ಯೆಯಾಗಿದ್ದಾನೆ.
ಬಿಜೆಪಿ ಪಕ್ಷದ ಕಾರ್ಯಕರ್ತನೇ ಮಂತ್ರಿ ವಿರುದ್ಧ ದೂರು ನೀಡಿದ್ದ. ಬಿಜೆಪಿ (BJP) ಸರ್ಕಾರ ಯಾರನ್ನ ಸಾಯಿಸುತ್ತೋ, ಯಾರನ್ನು ಉಳಿಸತ್ತೋ? ಈ ಬಿಜೆಪಿ ಸರ್ಕಾರದ ಬಗ್ಗೆ ದೇವರಿಗೆ ಗೊತ್ತು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಮನಗರದಲ್ಲಿ ಹೇಳಿದ್ದಾರೆ.
ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸಿ, ಒಳಗೆ ಹಾಕಿ: ಪ್ರಿಯಾಂಕ್ ಖರ್ಗೆ ಆಗ್ರಹ
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್, ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ತಮ್ಮನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರೇ ಕಾರಣ ಎಂದು ಸಂತೋಷ್ ಅವರ ಸಹೋದರ ಪ್ರಶಾಂತ್ ಪಾಟೀಲ್ ಆರೋಪಿಸಿದ್ದರು.