ತಂದೆಯೊರ್ವ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ತನ್ನ ಮಗುವಿನ ಫೋಟೋ ಹಿಡಿದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರುವ ದೃಶ್ಯ ಕಂಡುಬಂತು.
ಬೆಂಗಳೂರು, (ಜುಲೈ.18): ನಗರದ ನಿವಾಸಿಯೊಬ್ಬರು ನನ್ನ ಇಡೀ ಕುಟುಂಬಕ್ಕೆ ಸೋಂಕು ತಗುಲಿದರೇ ಏನು ಮಾಡುವುದು ಎಂದು ಸಿಎಂ ಯಡಿಯೂರಪ್ಪ ಮನೆ ಮುಂದೆ ಗುರುವಾರ ಕೆಲ ಕಾಲ ಗೋಳಾಟ ನಡೆಸಿದ ಕರುಣಾಜನಕ ಘಟನೆ ನಡೆದಿತ್ತು.
ಅವ್ಯವಸ್ಥೆಗಳ ಆಗರ ವಿಕ್ಟೋರಿಯಾ; ಸೋಂಕಿತರ ಗೋಳು ಕೇಳೋರಿಲ್ಲ..!
ಇದೀಗ ತಂದೆಯೊರ್ವ, ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ತನ್ನ ಮಗುವಿನ ಫೋಟೋ ಹಿಡಿದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರುವ ದೃಶ್ಯ ಕಂಡುಬಂತು.