ರಾಜ್ಯ ರಾಜಧಾನಿಯಲ್ಲಿ ಅನ್ನದಾತರ ಕಹಳೆ.. ರೈತ ವಿರೋಧಿ ಕಾಯ್ದೆಗಳ ರದ್ದಿಗೆ ಆಗ್ರಹ

Nov 28, 2023, 10:01 AM IST

ಬೆಂಗಳೂರಿನಲ್ಲಿ(Bengaluru) ಮತ್ತೊಮ್ಮೆ ರೈತರು ಹೋರಾಟಕ್ಕೆ ಇಳದಿದ್ದಾರೆ. ರೈತ ವಿರೋಧಿ ಕಾಯ್ದೆಗಳ ರದ್ದು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಭಾನುವಾರದಿಂದ ಫ್ರೀಡಂಪಾರ್ಕ್‌ನಲ್ಲಿ(Freedom Park) ಹೋರಾಟ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಜೊತೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಗಿ ಹೋರಾಟಕ್ಕಿಳಿದಿವೆ. ಸರ್ಕಾರ ಧಿಕ್ಕಾರ ಕೂಗಿದ ರೈತರು(Farmers) ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ರು. ಅನ್ನದಾತರ ಹೋರಾಟಕ್ಕೆ ಆಶಾಕಾರ್ಯಕರ್ತೆಯರು ಸೇರಿದಂತೆ ವಿವಿಧ 58 ಸಂಘಟನೆಗಳು ಸಾಥ್ ನೀಡಿದ್ವು. ಕೇಂದ್ರ ಸರ್ಕಾರದ(Central government) ನೀತಿಗಳಿಂದ ತೊಂದರೆಗೊಳಗಾಗಿರುವ ವಿವಿಧ ಸಮುದಾಯಗಳು, ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು 21 ಬೇಡಿಕೆ ಪಟ್ಟಿ ಇಟ್ಟಿದ್ದಾರೆ. ವಿರೋಧ ಮಧ್ಯೆ ಜಾರಿ ಮಾಡಿರೋ APMC ಕಾಯ್ದೆ ರದ್ದು ಮಾಡಬೇಕು. ಫಸಲ್ ಭಿಮಾ ಯೋಜನೆಯಲ್ಲಿನ ವಂಚನೆ ಸರಿಪಡಿಸಬೇಕು. ರಾಜ್ಯ ಭೂ ಸುಧಾರಣಾ ತಿದ್ದುಪಡಸಿ ಕಾಯ್ದೆ ರದ್ದು ಮಾಡಬೇಕು ಅನ್ನೋದು ಪ್ರಮುಖ ಬೇಡಿಕೆಗಳು. ಅಲ್ಲದೇ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನ ಮಾಡಬೇಕು, ಬಿತ್ತನೆ ಬೀಜ, ರಸಗೊಬ್ಬರ, ಕರೆಂಟ್‌ ಮೇಲೆ ಸಬ್ಸಿಡಿ ಹೆಚ್ಚಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಕಾರ್ಮಿಕರ ಕೆಲಸ ಅವಧಿ 8ರಿಂದ 12 ಗಂಟೆ ಏರಿಸುವದನ್ನ ಕೈಬಿಡುವಂತೆಯೂ ಆಗ್ರಹಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಕನಿಷ್ಟ ವೇತನ ಮಾಸಿಕ 26,000 ರೂ ನಿಗದಿ ಮಾಡಬೇಕು, ಬಗ‌ರ್ ಹುಕುಂ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ರೈತರ ಮೇಲೆ‌ಹಾಕಿರುವ ಕೇಸ್‌ಗಳನ್ನ ವಜಾ ಮಾಡಬೇಕು ಅನ್ನೋ ಬೇಡಿಕೆ ಜೊತೆಗೆ ಆಶಾ ಕಾರ್ಯಕರ್ತೆಯರನ್ನ ಕಾರ್ಮಿಕರೆಂದು ಪರಿಗಣಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  3 ದಿನದಲ್ಲಿ ಸಿನಿಮಾ 6 ವರೆ ಕೋಟಿ ಕಲೆಕ್ಷನ್! ಇದು ರೆಬೆಲ್ ರೆಕಾರ್ಡ್ಸ್!