ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಡಿ.ಕೆ.ಶಿವಕುಮಾರ್; ಏನಿದು 4 ಸಾಲಿನ ಬಂಡೆ ತಂತ್ರ?

ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಡಿ.ಕೆ.ಶಿವಕುಮಾರ್; ಏನಿದು 4 ಸಾಲಿನ ಬಂಡೆ ತಂತ್ರ?

Published : Aug 23, 2025, 07:08 PM IST

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಯನ್ನು ಉಲ್ಲೇಖಿಸಿ ಹೊಸ ರಾಜಕೀಯ ತಂತ್ರ ಪ್ರದರ್ಶಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಹಿಂದುತ್ವದ ಅಸ್ತ್ರವನ್ನು ಬಳಸುತ್ತಿರುವ ಅವರು, 'ಸಾಫ್ಟ್ ಹಿಂದುತ್ವ'ದ ಹಾದಿಯಲ್ಲಿ ಮುಂದುವರೆದಿದ್ದಾರೆ.

ಬೆಂಗಳೂರು (ಆ.23): ರಾಜ್ಯ ರಾಜಕಾರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ನಡೆಗಳು ತೀವ್ರ ಕುತೂಹಲ ಮೂಡಿಸಿವೆ. ಅದರಲ್ಲೂ ಸದನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾರ್ಥನಾ ಗೀತೆಯಾದ 'ನಮಸ್ತೇ ಸದಾ ವತ್ಸಲೇ...' ಹಾಡಿನ ನಾಲ್ಕು ಸಾಲುಗಳನ್ನು ಉಲ್ಲೇಖಿಸಿ, ಡಿ.ಕೆ.ಶಿವಕುಮಾರ್ ವಿರೋಧ ಪಕ್ಷಗಳಿಗೆ ಕೌಂಟರ್ ನೀಡಿದ್ದು, ಇದು ಅವರ ಹೊಸ ರಾಜಕೀಯ ತಂತ್ರದ ಭಾಗವೆಂಬ ಚರ್ಚೆಗೆ ಕಾರಣವಾಗಿದೆ. ಇದು ಡಿ.ಕೆ.ಶಿವಕುಮಾರ್ 'ಸಾಫ್ಟ್ ಹಿಂದುತ್ವ'ದ ಹೊಸ ಅಧ್ಯಾಯದ ಆರಂಭವೇ ಎಂಬ ಪ್ರಶ್ನೆ ಮೂಡಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಹಿಂದುತ್ವದ ಹೋರಾಟ
ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಿಂದುತ್ವದ ಅಸ್ತ್ರವನ್ನು ಬಳಸುತ್ತಿದೆ. ಈ ಸವಾಲನ್ನು ಎದುರಿಸಲು ಕಾಂಗ್ರೆಸ್‌ನಿಂದ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಹಿಂದುತ್ವದ ಅಸ್ತ್ರವನ್ನು ಹಿಡಿದಿದ್ದಾರೆ. ವಿರೋಧ ಪಕ್ಷಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವಾಗ, ಶಿವಕುಮಾರ್ 'ನಾನು ಹಿಂದೂ, ನಾನು ಕಾಂಗ್ರೆಸ್ಸಿಗ' ಎಂಬ ಹೇಳಿಕೆಯ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸಾಫ್ಟ್ ಹಿಂದುತ್ವ'ದ ರಣತಂತ್ರ ಮತ್ತು ಗುರಿ

ಡಿ.ಕೆ.ಶಿವಕುಮಾರ್ ಅವರ 'ಸಾಫ್ಟ್ ಹಿಂದುತ್ವ'ದ ಹಾದಿ ಹೊಸದೇನಲ್ಲ. ಈ ಹಿಂದೆ ಕನಕಪುರದಲ್ಲೂ ಇಂತಹ ಹೆಜ್ಜೆ ಇಟ್ಟಿದ್ದ ಅವರು, ಹಿಂದುತ್ವದ ಪ್ರಮುಖ ಕಾರ್ಯಕ್ರಮಗಳು ಮತ್ತು ದೇವಾಲಯಗಳ ಭೇಟಿ ಮೂಲಕ ತಮ್ಮ ನಾಯಕತ್ವದ ಮೇಲೆ ಹಿಂದುತ್ವದ ಮುದ್ರೆಯೊತ್ತಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಿಂದ ಭಿನ್ನವಾದ ಈ ದಾರಿಯನ್ನು ಅವರು ಆಯ್ದುಕೊಂಡಿರುವುದು ಒಂದು ದೊಡ್ಡ ಗುರಿಯನ್ನು ಸೂಚಿಸುತ್ತದೆ.

ಈ ನಡೆಯು ಕಾಂಗ್ರೆಸ್‌ಗೆ ಹಿಂದುತ್ವದ ವಿಚಾರದಲ್ಲಿ ಹೊಸ ಶಕ್ತಿ ತುಂಬಲಿದೆ ಎಂಬುದು ಡಿ.ಕೆ.ಶಿ. ಅವರ ಆಶಯವಾಗಿದೆ. ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜೊತೆಗೆ ಹಿಂದೂ ಸಮುದಾಯದ ಒಂದು ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ. ವಿರೋಧ ಪಕ್ಷದ ನಾಯಕರು ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಾತನಾಡಿದಾಗ, 'ಸಂಘ ಮಂತ್ರ'ದ ಮೂಲಕ ಡಿ.ಕೆ.ಶಿ. ಅವರು ನೀಡಿದ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more