Jan 25, 2022, 10:24 AM IST
ಬೆಂಗಳೂರು (ಜ.25): ರಾಜ್ಯದಲ್ಲಿ ಕೊರೋನಾ (Coronavirus) ಸೋಂಕು ದಿನೆ ದಿನೇ ತೀವ್ರಗೊಳ್ಳುತ್ತಿದ್ದು, 3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 ಸೋಮವಾರ ದಾಖಲಾಗಿದೆ. ಅಲ್ಲದೆ, ಬರೋಬ್ಬರಿ 16 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿದೆ. ಮೂವರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢಪಡುತ್ತಿದ್ದು, ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಬರೋಬ್ಬರಿ ಶೇ.33ಕ್ಕೆ ಹೆಚ್ಚಳವಾಗಿದೆ. 3ನೇ ಅಲೆಯಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಇದಾಗಿದೆ. ಇನ್ನು ಎರಡನೇ ಅಲೆಯಲ್ಲಿ ಅತಿ ಹೆಚ್ಚು ಶೇ.36 ರಷ್ಟು ವರದಿಯಾಗಿತ್ತು.
Covid 19 Spike: ಕೊಪ್ಪಳದ 9 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!
ಈ ಮಧ್ಯೆ ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ (Weekend Curfew) ರದ್ದಾದ ಮೇಲೆ ಕಲ್ಯಾಣ ಮಂಟಪಗಳಲ್ಲಿ 50-50 ವಿನಾಯ್ತಿ ನೀಡಬೇಕೆಂದು ಮಾಲೀಕರು ಸರ್ಕಾರದ ಬಳಿ ಬೇಡಿಕೆಯನ್ನಿಟ್ಟಿದ್ದಾರೆ. ಚಿತ್ರಮಂದಿರಗಳಿಗೆ ಶೇಕಡಾ 50ರ ವಿನಾಯಿತಿ ಕೊಟ್ಟು, ಮದುವೆ ಸೀಸನ್‌ನಲ್ಲಿ ಕಲ್ಯಾಣ ಮಂಟಪಗಳಿಗೆ ನಿರ್ಬಂಧವನ್ನು ಹೇರಿದ್ದೀರಿ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ಮಾಡಬೇಡಿ ಎಂದು ಸರ್ಕಾರದ ಬಳಿ ಕಲ್ಯಾಣ ಮಂಟಪದ ಮಾಲೀಕರು ಒತ್ತಡವನ್ನು ಹಾಕುತ್ತಿದ್ದಾರೆ.