ಹೊಸ ರೂಪ ಬದಲಿಸಿ ದಾಳಿ ಮಾಡ್ತಿರುವ ಎಓ.1 ವೈರಸ್..! ಅಯ್ಯಪ್ಪ ಭಕ್ತರೇ ಕುರುನಾಡಿಗೆ ಕಂಟಕ ಆಗ್ತಾರಾ..?

Dec 18, 2023, 9:29 AM IST

ಇಷ್ಟು ದಿನ ಸೈಲೆಂಟ್ ಆಗಿದ್ದ ಕೊರೊನಾ(Corona) ಮತ್ತೆ ವೈಲೆಂಟ್ ಆಗಿದೆ. ಲಕ್ಷಾಂತರ ಮಂದಿಯ ಜೀವ ತೆಗೆದು ತಾಂಡವವಾಡಿದ್ದ ಈ ಹೆಮ್ಮಾರಿ ಇದೀಗ ತನ್ನ ರೂಪವನ್ನ ಬದಲಿಸಿಕೊಂಡು ಮತ್ತೆ ಹೈಸ್ಪೀಡ್ ಆಗಿ ಹರಡ್ತಿದೆ. ಈಗಾಗಲೇ ದೇವರ ನಾಡಿನಲ್ಲಿ ಎಓ.1 ವೈರಸ್ ಪತ್ತೆಯಾಗಿದ್ದು. ಇಡೀ ದೇಶವೇ ಹೈ ಅಲರ್ಟ್‌ ಆಗಿದೆ. ಈ ಮಧ್ಯೆ ರಾಜ್ಯಕ್ಕೂ ಆತಂಕ ಶುರುವಾಗಿದೆ. ಅಯ್ಯಪ್ಪನ ಭಕ್ತರು ಕೇರಳದ(Kerala) ಶಬರಿಮಲೆಗೆ ಹೋಗಿ ವಾಪಸ್ ಆಗ್ತಿದ್ದು, ಇದೇ ಈಗ ಎಲ್ಲರಲ್ಲೂ ಆತಂಕ ತಂದಿಟ್ಟಿರೋದು. ಈ ಕಾಣಕ್ಕಾಗಿಯೇ ಆರೋಗ್ಯ ಇಲಾಖೆ ಕೇರಳ ಅಯ್ಯಪ್ಪನ ಭಕ್ತರೇ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಷ್ಟುದಿನ ಇದ್ರೂ ಇಲ್ಲದಂಗಿದ್ದ ಕ್ರೂರಿ ಕೊರೊನಾ ಮತ್ತೆ ಅಬ್ಬರಿಸೋ ಸುಳುವು ಕೊಟ್ಟಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗ್ತಿವೆ. ಸಾಂಕ್ರಾಮಿಕ ರೋಗಗಳ ನಡುವೆ ಕೋವಿಡ್ ರೂಪಾಂತರಿ ವೈರಸ್ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆಯಾಗ್ತಿದ್ದು, ಜನ ಅಕ್ಷರಶಃ ಮತ್ತೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ತಿಂಗಳಷ್ಟೆ ಚೀನಾದಲ್ಲಿ(China) ಹೊಸ ಸೋಂಕು ಪತ್ತೆಯಾಗಿತ್ತು. ಮಕ್ಕಳನ್ನ ಬಿಟ್ಟು ಬಿಡದೇ ಕಾಡಿತ್ತು ನಿಗೂಢ ನ್ಯೂಮೇನಿಯಾ. ಈ ಸೋಂಕು ಚೀನಾದಲ್ಲಿ ಕೊರೊನಾ ಕರಾಳತೆ ಮತ್ತೆ ಸೃಷ್ಟಿಸಿತ್ತು. ಮಕ್ಕಳನ್ನೇ ಹೆಚ್ಚಾಗಿ ಬಾಧಿಸಿದ್ದ ನಿಗೂಢ ಸೋಂಕಿನಿಂದ ಚೀನಾದಲ್ಲಿ ಆಸ್ಪತ್ರೆಗಳು ತುಂಬಿ ಹೋಗಿದ್ವು. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೆ ನೆಲದ ಮೇಲೆಲ್ಲಾ ಟ್ರೀಟ್ಮೆಂಟ್ ನೀಡಲಾಗಿತ್ತು. ಈ ಬೆನ್ನಲ್ಲೇ ಇದೀಗ ದೇಶದಲ್ಲಿ ಹೊಸಾ ವೈರಸ್ ಟೆನ್ಶನ್ ದಂದಿಟ್ಟಿದೆ. ಅದು ಕೂಡ ನಮ್ಮ ಪಕ್ಕದ ರಾಜ್ಯ ಕೇರಳಾದಲ್ಲಿ ಈ ಹೈಸ್ಪೀಡ್ ವೈರಸ್ ಪತ್ತೆಯಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಈ ರಾಶಿಯವರಿಗೆ ಆಪ್ತರಿಂದ ದುಃಖ ಉಂಟಾಗಲಿದ್ದು, ಸ್ತ್ರೀಯರಿಗೆ ಬಲವಿದೆ..