Jul 7, 2022, 3:29 PM IST
ಚಾಮರಾಜಪೇಟೆ (ಜು. 07): ಮಹದೇಶ್ವರ ಬೆಟ್ಟದ ದೊಡ್ಡಾಣೆ (Doddane) ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ (Roads) ಇಲ್ಲಿ ಯಾರಿಗಾದರೂ ಹುಷಾರು ತಪ್ಪಿದರೆ 8-9 ಕಿಮೀ ಡೋಲಿಯಲ್ಲಿ ಹೊತ್ತು ಕರೆದುಕೊಂಡು ಬರಬೇಕು, ಜೊತೆಗೆ ಕಾಡುಪ್ರಾಣಿಗಳ ಭಯ ಬೇರೆ. ಇದನ್ನ ಮನಗಂಡ ಅರಣ್ಯ ಇಲಾಖೆ ಜನವನ ಎಂಬ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ದಿನದ 24 ಗಂಟೆ ಈ ವಾಹನದ ಸೇವೆ ಇರುವಂತೆ ವ್ಯವಸ್ಥೆ ಮಾಡಿದ್ದರು. ಗರ್ಭಿಣಿಯೊಬ್ಬರಿಗೆ ಮಧ್ಯರಾತ್ರಿ ಹೆರಿಗೆ ಬೇನೆ ಕಾಣಿಸಿಕೊಂಡಿತು. ನೆಟ್‌ವರ್ಕ್ ಸಮಸ್ಯೆಯಿಂದ ಜನವನ ವಾಹನವನ್ನು ಸಂಪರ್ಕಿಸಿದರೆ ಸಾಧ್ಯವಾಗಿಲ್ಲ. ಕೊನೆಗೆ ಡೋಲಿಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ.