ಪಿಎಂಗೆ ಬರೆದಿರುವ ದೊಡ್ಡ ಗೌಡರ ಪತ್ರದಲ್ಲೇನಿದೆ..? ಬಂದ್ ವಿಚಾರದಲ್ಲಿ ಎರಡು ಬಣಗಳ ವಾದ ವಿವಾದ ಏನು ?

ಪಿಎಂಗೆ ಬರೆದಿರುವ ದೊಡ್ಡ ಗೌಡರ ಪತ್ರದಲ್ಲೇನಿದೆ..? ಬಂದ್ ವಿಚಾರದಲ್ಲಿ ಎರಡು ಬಣಗಳ ವಾದ ವಿವಾದ ಏನು ?

Published : Sep 26, 2023, 08:50 AM IST

ಕುರುಬೂರು, ವಾಟಾಳ್ ಬಣಗಳಲ್ಲಿ ಮೂಡದ ಒಮ್ಮತ!
ವಾಟಾಳ್ ಬಣಕ್ಕೆ ಬೆಂಬಲ ಸೂಚಿಸದ ಹಲವು ಸಂಘಟನೆ! 
ರಾಜಕೀಯ ಪಕ್ಷ ಬಂದ್‌ಗೆ ಕರೆ ನೀಡಿದ್ದೇಕೆ ಎಂದ ಕರವೇ!

ಇಂದು ಸಿಲಿಕಾನ್ ಸಿಟಿ ಬಂದ್ ಆಗಿದೆ. ಹಾಗಾಗಿ ಸಿಲಿಕಾನ್ ಸಿಟಿ ಜನರು ಹೊರಗಡೆ ಓಡಾಡೋಕೆ ಕಿರಿಕಿರಿ ತಪ್ಪಿದ್ದಲ್ಲ. ಹಾಗಂತ ಇಂದು ಒಂದೇ ದಿನ ಈ ಬಂದ್ ಇರುವುದಿಲ್ಲ. ಈ ಬಂದ್ ನಂತರ ಮತ್ತೆ ಎರಡು ದಿನದ ನಂತರ ಅಖಂಡ ಕರ್ನಾಟಕದಲ್ಲಿ ಬಂದ್‌ಗೆ(Bandh) ಕರೆ ನೀಡಲಾಗಿದೆ. ಕಾವೇರಿ ವಿಚಾರವಾಗಿ ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರನ್ನು(Bengaluru) ಇಂದು ಬಂದ್‌ ಮಾಡಲಾಗಿದೆ. ಕರ್ನಾಟಕ (Karnataka) ತಮಿಳುನಾಡು (Tamilnadu) ಮಧ್ಯೆ ಕಾವೇರಿದ ಜಲಯುದ್ಧ ಕರ್ನಾಟಕದಲ್ಲಿ ರೋಷಾಗ್ನಿಯಾಗಿ ಧಗಧಗಿಸುತ್ತಿದೆ. ಕಾವೇರಿ ನಮ್ಮವಳು. ತಮಿಳುನಾಡಿಗೆ ನೀರು ಬಿಡೋದನ್ನು ನಿಲ್ಲಿಸಿ ಎಂದು ಬೀದಿಗಿಳಿದು ರೈತರು, ಕನ್ನಡಪರ ಸಂಘಟನೆಗಳು(Pro-Kannada organizations) ಹೋರಾಟ ಮಾಡುತ್ತಿವೆ. ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದಾಗೆಲ್ಲ.. ವಿರೋಧ ಪಕ್ಷದವರು ಹಾಗೂ ಕರವೇ ಸೇರಿದಂತೆ ನೂರಾರು ಸಂಘಟನೆಕಾರರು ಸೇರಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಾರಿಯೂ ಅದೇ ಅಧ್ಯಾಯ ಮುಂದುವರೆದ ಹಾಗಿದೆ. ಹೀಗೆ ಬಂದ್ ಕರೆಯುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟಿಸೋ ಪ್ರಯತ್ನ ಅವರದ್ದಾಗಿರುತ್ತೆ. ಆದರೆ ಆ ಸುದ್ದಿಯ ಹಿಂದಿದೆಯೇ, ಇನ್ನೊಂದು ಸುದ್ದಿ ಜನರನ್ನ ಇನ್ನಷ್ಟು ಹೌಹಾರುವಂತೆ ಮಾಡಿದೆ. ಒಂದೇ ವಾರದಲ್ಲಿ ಎರಡು ಬಂದ್, ಅದ್ಹೇಗೆ ಯಾಕೆ ಅಂತ ಎಲ್ಲ ತಲೆ ಬಿಸಿ ಮಾಡ್ಕೊಂಡಿರುವಾಗಲೇ ಕರ್ನಾಟಕ ಪರ ಹೊರಾಟಗಾರ ವಾಟಾಳ್ ನಾಗರಾಜ್(Vatal Nagaraj), ಅಖಂಡ ಕರ್ನಾಟಕ ಬಂದ್‌ಗೆ ಕಾರಣ ಏನು ಅನ್ನೊದಕ್ಕೂ ಸ್ಪಷ್ಟತೆ ಕೊಟ್ಟಿದ್ದಾರೆ. ವಾಟಾಳ್‌ ನಾಗರಾಜ್ ಅವರು ಹೀಗೆ ರೊಚ್ಚಿಗೆದ್ದು ಹೇಳ್ತಿರೋ ಮಾತನ್ನ ಕೇಳ್ತಿದ್ರೆ ಗೊತ್ತಾಗ್ತಿದೆ ಇವರು ಯಾವ ಮಟ್ಟಿಗೆ ರೊಚ್ಚಿಗೆದ್ದಿದ್ದಾರೆ ಅಂತ. ಆದರೆ ಮಾತಿನ ಮಧ್ಯಯೇ ಇಂದು ಬಂದ್‌ಗೆ ನಮ್ಮವರ ಸಾಥ್ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಒಂದು ಮಾತನ್ನ ಹೇಳಿದ್ದನ್ನ ಕೇಳ್ತಿದ್ರೆ ಗೊತ್ತಾಗುತ್ತೆ ಈ ಡಬಲ್ ಬಂದ್ ಹಿಂದೆ ರಾಜಕೀಯ ನಡೀತಾ ಇದೆ ಅಂತ.

ಇದನ್ನೂ ವೀಕ್ಷಿಸಿ: Today Horoscope: ಮಿಥುನ ರಾಶಿಯವರಿಗೆ ಇಂದು ಸಂಗಾತಿಯಿಂದ ಬೇಸರವಾಗಲಿದ್ದು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!