Oct 26, 2023, 11:27 AM IST
ಬರದ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ(Mysore) ನಡೆದ 2023ನೇ ವರ್ಷದ ದಸರಾ(Dasara) ಯಾವುದೇ ತೊಡಕಿಲ್ಲದೆ ವೈಭವಪೂರಿತವಾಗಿ ಸಮಾಪ್ತಿಯಾಗಿದೆ. ನಾಲ್ಕನೇ ಬಾರಿಗೆ ಯಶಸ್ವಿಯಾಗಿ ಅಂಬಾರಿಯನ್ನ ಹೊತ್ತು ಸಾಗಿದ ಕ್ಯಾಪ್ಟನ್ ಅಭಿಮನ್ಯು(Abhimanyu) ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಅರಮನೆ ಅಂಗಳದಲ್ಲಿಗ ರಿಲ್ಯಾಕ್ಸ್ ಮೂಡಿನಲ್ಲಿ ಇದೆ. ದಸರಾಗಾಗಿ 50 ದಿನಗಳ ಹಿಂದೆ ಅರಮನೆ ಅಂಗಳಕ್ಕೆ ಬಂದ ಗಜಪಡೆ ಅರಣ್ಯ ಇಲಾಖೆ ರಾಜಾತಿಥ್ಯದಿಂದ ತಮ್ಮ ತೂಕ ಹೆಚ್ಚು ಮಾಡಿವೆ. ಎಷ್ಟೆಷ್ಟು ತೂಕ ಹೆಚ್ಚಿಸಿಕೊಂಡಿದೆ ಅಂತಾ ನೋಡೋದಾದ್ರೆ. 4,370 ಕೆ.ಜಿ. ಇದ್ದ ಭೀಮ ಬರೋಬ್ಬರಿ 315 ಕೆ.ಜಿ. ತೂಕ ಹೆಚ್ಚಿಸಿಕೊಂಡ 4,685 ಕೆ.ಜಿಯಾಗಿದ್ದಾನೆ. 5,160 ಕೆ.ಜಿ ಇದ್ದ ಕ್ಯಾಪ್ಟನ್ ಅಭಿಮನ್ಯು 140 ಕೆ.ಜಿ ತೂಕ ಹೆಚ್ಚಿಸಿಕೊಂಡು 5,300 ಕೆ.ಜಿ ಆಗಿದ್ದಾನೆ. 4,970 ಕೆಜಿ ಇದ್ದ ಪ್ರಶಾಂತ 245 ಕೆ.ಜಿ.ತೂಕ ಹೆಚ್ಚಿಸಿಕೊಂಡು 5,215 ಆಗಿದ್ದಾನೆ. 5,080 ಕೆ.ಜಿ ಇದ್ದ ಗೋಪಿ 160 ಕೆ.ಜಿ.ತೂಕ ಹೆಚ್ಚಿಸಿಕೊಂಡು 5,240 ಕೆ.ಜಿ ಆಗಿದ್ದಾನೆ, ಇನ್ನು 5,680 ಕೆ.ಜಿ.ತೂಕ ಹೊಂದಿದ್ದ ಮಾಜಿ ಕ್ಯಾಪ್ಟನ್ ಅರ್ಜುನ 170 ಕೆ.ಜಿ. ತೂಕ ಹೆಚ್ಚಿಸಿಕೊಂಡು 5,850 ಕೆಜಿ ಆಗಿದ್ದಾನೆ. ಒಟ್ಟಿನಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಗಜಪಡೆ ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದು ಎಲ್ಲರಲ್ಲೂ ಸಂತಸ ಮೂಡಿಸಿದೆ.
ಇದನ್ನೂ ವೀಕ್ಷಿಸಿ: ಕಾಲುವೆಯಲ್ಲಿ ಬೆಳೆದು ನಿಂತ ಗಿಡಗಳು.. ರೈತರಿಗೆ ಸಂಕಷ್ಟ: ಯಾದಗಿರಿ ಅನ್ನದಾತ ಕಂಗಾಲು