Aug 22, 2021, 3:04 PM IST
ವಿಜಯಪುರ (ಆ.22): ಶಾಸಕ ಯತ್ನಾಳ್ ಬಾಯಲ್ಲಿ ಗುಂಡಿನ ಮಾತು ಕೇಳಿದೆ..! ಎಸ್ ಪಿ ಹಾಗೂ ಡಿಸಿ ಅವರು ಬರೀ ಹಿಂದೂ ಹಬ್ಬ, ದೇವಾಲಯಗಳ ಮೇಲೆ ಕಾನೂನು ಮಾಡಿದರೆ ನಾನು ಕೇಳಲ್ಲ. ಬಿಜಾಪುರದಲ್ಲಿ ಕಾನೂನು ಮಾಡಿದರೆ ನಾ ಕೇಳಲ್ಲ. ಬಾಳ ಅಂದರೆ ನನಗೆ ಗುಂಡು ಹಾಕಬಹುದು..! ನಾ ಸತ್ತರು ಹೆಸರು ತೆಗೆದುಕೊಂಡೆ ಸಾಯಬೇಕು ಎಂದರು.
'ವಾರ ತಡ್ಕೊಳ್ಳಿ.. ಕಾವೇರಿಯ ಸ್ಫೋಟಕ ದೃಶ್ಯ ನನ್ನ ಬಳಿ ಇದೆ'
ವಿಜಯಪುರ ನಗದ ನೂತನ ಆಸ್ಪತ್ರೆ ಕಟ್ಟಡ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶಾಸಕ ಯತ್ನಾಳ್ ಇವತ್ತು ಸಿಎಂಗೆ ಕೂಡಾ ಹೇಳಿದ್ದೇನೆ ಗಣೇಶೋತ್ಸವಕ್ಕೆ ತೊಂದರೆ ಮಾಡಬಾರದು ಎಂದು. ಹತ್ತತ್ತು ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರಾ.? ಗಣಪತಿ ಬಂದಾಗ ಮಾತ್ರ ಕೊರೋನಾ ನೆನಪಾಗತ್ತದೆಯಾ..? ಗಣೇಶೋತ್ಸವಕ್ಕೆ 50 ಕಂಡೀಷನ್ ಹಾಕಿದ್ದಾರೆ, ಈ ಕುರಿತು ನಾನು ಸಿಎಂ ಅವರೊಂದಿಗೆ ಮಾತನಾಡಿರುವೆ. ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ ಎಂದಿದ್ದಾರೆ ಯತ್ನಾಳ್.