Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Jan 19, 2024, 11:02 AM IST

ಅಯೋಧ್ಯಾ ರಾಮ ಕರುನಾಡಿನಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾನೆ. ಕೋಟೆನಾಡು ಚಿತ್ರದುರ್ಗಕ್ಕೂ(Chitradurga) ಭಗವಾನ್ ಶ್ರೀರಾಮನಿಗೂ(Sri Rama) ಅವಿನಾಭಾವ ನಂಟು ಇರುವುದು ನಮ್ಮ ಭಾಗದ ಪುಣ್ಯ ಅಂತಿದ್ದಾರೆ ಈ ಭಾಗದ ಜನರು. ಹೀಗೆ ಬೆಟ್ಟದ ತುತ್ತ ತುದಿಯಲ್ಲಿ ಇರುವ ದೇವಾಲಯದ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲ(Karisiddeshwara Temple). ಶತಮಾನಗಳ ಹಿಂದೆ ಪವಾಡ ಪುರುಷ ಕರಿಸಿದ್ದೇಶ್ವರ ಸ್ವಾಮಿಗಳು ಬೆಟ್ಟದಲ್ಲಿ ವಾಸವಿದ್ದ ಸಮಯದಲ್ಲಿ, ಭಗವಾನ್ ಶ್ರೀರಾಮನು ತನ್ನ ಸೀತೆ ಮಾತೆಯ ಅನ್ವೇಷಣೆಗೆಂದು ಆಗಮಿಸಿದ್ದರು. ಈ ವೇಳೆ ಕರಿಸಿದ್ದೇಶ್ವರ ಶ್ರೀಗಳಿಗೆ ಶ್ರೀರಾಮನು ನಾನು ಇದೇ ಬೆಟ್ಟದಲ್ಲಿ ಎರಡು ದಿನ ಉಳಿಯುವುದಾಗಿ ಹೇಳಿದ್ರಂತೆ, ಯಾರೋ ಇರಬೇಕು ಎಂದು ಸ್ವಾಮಿಗಳು ಉಳಿಯಲು ಜಾಗ ಕೊಟ್ಟಿದ್ರು. ಈ ವೇಳೆ ಪೂಜೆಗೆಂದು ಶ್ರೀರಾಮನು ತನ್ನ ಬಾಣದಿಂದಲೇ ನಾವಿಯನ್ನು ನಿರ್ಮಿಸಿದಾಗ ಗಂಗೆಯು ಉದ್ಭವವಾಗಿದ್ದಾರೆ ಎನ್ನುವ ಪ್ರತೀತಿ ಇದೆ. ಅಂದಿನ ಭೈರವನ ಬೆಟ್ಟದಲ್ಲಿ ಶ್ರೀರಾಮನು ಸುತ್ತಾಡಿರುವ ಕುರುಹುಗಳಿವೆ. ಸೀತೆಯ ಅನ್ವೇಷಣೆ ಸಂದರ್ಭದಲ್ಲಿ ಶ್ರೀರಾಮ‌ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಮೊದಲ ಸ್ಥಳ ಭೈರವನ ಬೆಟ್ಟ ಈಗಿನ ರಾಮಗಿರಿ ಬೆಟ್ಟ.

ಇನ್ನೂ ಅಯೋಧ್ಯಾ(Ayodhya) ರಾಮನಿಗೂ ರಾಯಚೂರಿಗೂ ನಂಟಿಗೆ. ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಎನ್ನುವ ಗ್ರಾಮಕ್ಕೆ ರಾಮ ಬಂದಿದ್ದ ಎಂಬ ಉಲ್ಲೇಖವಿದೆ. ಪುಣ್ಯಕ್ಷೇತ್ರ ಯರಡೋಣಿಯನ್ನ ರಾಮಾಯಣ ಕಾಲದಲ್ಲಿ ಜಟ್ಟಿಂಗ ಮಹರಾಜ ಪಟ್ಟಣ ಅಂತಾ ಕರೆಯಲಾಗ್ತಿತ್ತು. ಸೀತೆಯನ್ನ ಅರಸುತ್ತಾ ಬಂದ ರಾಮ, ಯರಡೋಣಿ ಗ್ರಾಮದ ಬಳಿ ದಂಡಕಾರಣ್ಯದಲ್ಲಿ ಬಾಯಾರಿಕೆಯಾಗಿ ಬೃಹದಾಕಾರವಾದ ಬಂಡೆಗೆ ಬಾಣ ಹೊಡೆದ, ಆ ಬಳಿಕ ಅಲ್ಲಿ ತೀರ್ಥ ಉದ್ಭವವಾಗಿದೆ ಎಂಬ ಪ್ರತೀತಿ ಇದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಗಜ ಕೇಸರಿ ಯೋಗವಿದ್ದು, ಇಂದು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ