Jul 9, 2022, 1:54 PM IST
ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ (Amarnath Yatra) ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ ಕಾರಣ ಗುಹೆಯ ಸಮೀಪದಲ್ಲೇ ದಿಢೀರ್ ಭಾರೀ ಪ್ರವಾಹ ಕಾಣಿಸಿಕೊಂಡಿದೆ.
ಅಮರನಾಥ್ ದುರಂತ: ಮೈಸೂರು, ಬೀದರ್, ಶಿವಮೊಗ್ಗದ ಪ್ರವಾಸಿಗರು ಬೇಸ್ ಕ್ಯಾಂಪ್ನಲ್ಲಿ ಸೇಫ್
ಶಿವಮೊಗ್ಗದಿಂದ 16 ಮಂದಿಯ ತಂಡ ಅಮರ್ ನಾಥ ಯಾತ್ರೆಗೆ ತೆರಳಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪರ್ಕಕ್ಕೆ ಸಿಕ್ಕಿದ್ದು, 'ನಾವು ಹೆಲಿಪ್ಯಾಡ್‌ನಲ್ಲಿ ಸುರಕ್ಷಿತವಾಗಿದ್ದೇವೆ, ನಮಗೆ ಯಾವುದೇ ತೊಂದರೆಯಾಗಿಲ್ಲ. ಇಲ್ಲಿ ನಮ್ಮ ಆರ್ಮಿಯವರು ನಮ್ಮನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಂಡಿದ್ದಾರೆ. ಭಗವಂತನ ದರ್ಶನ ಮಾಡಲು ನಮಗೆ ಅವಕಾಶ ಕೊಡಿ ಎಂದು ನಾವು ಸಾಕಷ್ಟು ಫೈಟ್ ಮಾಡಿದೆವು, ಆದರೂ ನಮ್ಮನ್ನು ಬಿಡಲಿಲ್ಲ. ಹೀಗಾಗಿ ಅಪಘಾತದಿಂದ ಬಚಾವಾದೆವು ಅನಿಸ್ತಾ ಇದೆ' ಎಂದು ಮಹಿಳಾ ತಂಡದವರು ಹೇಳಿದ್ದಾರೆ.