ವಿದ್ಯಾಗಮ ಯೋಜನೆ ಆರಂಭವಾದ ಬಳಿಕ ಶಿಕ್ಷಕರಲ್ಲಿ ಸೋಂಕಿನ ಪ್ರಮಾಣ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 110 ಶಿಕ್ಷಕರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 57 ಶಿಕ್ಷಕರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು (ಅ. 09): ವಿದ್ಯಾಗಮ ಯೋಜನೆ ಆರಂಭವಾದ ಬಳಿಕ ಶಿಕ್ಷಕರಲ್ಲಿ ಸೋಂಕಿನ ಪ್ರಮಾಣ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 110 ಶಿಕ್ಷಕರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 57 ಶಿಕ್ಷಕರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ನಿಜಕ್ಕೂ ಇದು ಆಘಾತಕಾರಿ ಬೆಳವಣಿಗೆ.
ಅ. 15 ರಿಂದ ಶಾಲೆಯನ್ನು ಆರಂಭಿಸಬೇಕಾ? ಬೇಡವಾ? ಎನ್ನುವುದರ ಬಗ್ಗೆ ಚರ್ಚೆ ಶುರುವಾದ ಬೆನ್ನಲ್ಲೇ ಈ ಅಂಕಿಅಂಶಗಳನ್ನು ನೋಡಿದರೆ ಪೋಷಕರಿಗೆ ಭಯ ಶುರುವಾಗೋದು ಸಹಜ. ಶಿಕ್ಷಕರು ಹಾಗೂ ಮಕ್ಕಳು ಇಬ್ಬರನ್ನೂ ಅಪಾಯಕ್ಕೆ ದೂಡಿದಂತಾಗುತ್ತದೆ.