KGF 2: ಇನ್ನೂ ಮುಗಿದಿಲ್ಲ ಯಶ್ 'ಕೆಜಿಎಫ್​ 2' ಚಿತ್ರದ ಚಿತ್ರೀಕರಣ!

KGF 2: ಇನ್ನೂ ಮುಗಿದಿಲ್ಲ ಯಶ್ 'ಕೆಜಿಎಫ್​ 2' ಚಿತ್ರದ ಚಿತ್ರೀಕರಣ!

Suvarna News   | Asianet News
Published : Feb 18, 2022, 03:56 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕೆಜಿಎಫ್ 2' ಏಪ್ರಿಲ್ 14ರಂದು ತೆರೆಗೆ ಬರಲು ಸಜ್ಜಾಗಿದ್ದು, ಈ ಮಧ್ಯೆ ಸಿನಿಮಾದ ಶೂಟಿಂಗ್ (Shooting)​ ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. 

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕೆಜಿಎಫ್ 2' (KGF 2) ಏಪ್ರಿಲ್ 14ರಂದು ತೆರೆಗೆ ಬರಲು ಸಜ್ಜಾಗಿದ್ದು, ರಾಕಿಂಗ್​ ಸ್ಟಾರ್ ಯಶ್​ (Yash) ಮತ್ತು ಪ್ರಶಾಂತ್​ ನೀಲ್ (Prashanth Neel)​ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ದೇಶಾದ್ಯಂತ ಹೈಪ್​ ಸೃಷ್ಟಿ ಆಗಿದೆ. ಈ ಮಧ್ಯೆ ಸಿನಿಮಾದ ಶೂಟಿಂಗ್ (Shooting)​ ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಹೌದು! ರಿಲೀಸ್​ ದಿನಾಂಕ ಸಮೀಪಿಸುತ್ತಿದ್ದರೂ ಕೂಡ ಚಿತ್ರೀಕರಣ ಮುಕ್ತಾಯ ಆಗಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಚಿತ್ರದ ಹೀರೋ ಇಂಟ್ರೊಡಕ್ಷನ್​ ಹಾಡನ್ನು (Introduction Song) ಮರು ಚಿತ್ರೀಕರಣ ಮಾಡಲು ಪ್ರಶಾಂತ್​ ನೀಲ್ ನಿರ್ಧರಿಸಿದ್ದಾರೆ.

KGF 2: ಯಶ್ ಎದುರು ಪೈಪೋಟಿಗಿಳಿಯಲು ಹಿಂದೇಟು ಹಾಕಿದ 'ಲಾಲ್ ಸಿಂಗ್ ಛಡ್ಡಾ'

ಈ ಬಗ್ಗೆ ಚಿತ್ರತಂಡದಲ್ಲಿ ಚರ್ಚೆ ನಡೆದಿದೆ. ಈ ಹಾಡಿಗಾಗಿ ಇನ್ನೂ 5 ದಿನಗಳ ಕಾಲ ಶೂಟಿಂಗ್​ ನಡೆಯಬೇಕಿದೆ. ಮುಖ್ಯವಾಗಿ ಈ ಚಿತ್ರದ ಹೀರೋ ಇಂಟ್ರೊಡಕ್ಷನ್​ ಹಾಡನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಆದರೆ ಈ ಹಾಡು ಮೂಡಿಬಂದಿರುವ ಬಗ್ಗೆ ನಿರ್ದೇಶಕರಿಗೆ ಸಮಾಧಾನ ಆದಂತಿಲ್ಲ. ಹಾಗಾಗಿ ಆ ಹಾಡನ್ನು ಮತ್ತೊಮ್ಮೆ ಹೊಸದಾಗಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ. ಎ. ಹರ್ಷ ಅವರು ಈ ಹಾಡಿಗೆ ಕೊರೊಯೋಗ್ರಫಿ ಮಾಡಲಿದ್ದು, ಹೈದರಾಬಾದ್​ನಲ್ಲಿ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ. ರವಿ ಬಸ್ರೂರ್ (Ravi Basrur) ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more