ಈ ವಾರ ಕಿಚ್ಚನ ಪಂಚಾಯ್ತಿಗೆ ಸುದೀಪ್ ಬರಲ್ಲ..! ಕಿಚ್ಚನ ಪಂಚಾಯ್ತಿಗೆ ಶೃತಿ  ಎಂಟ್ರಿ..!

ಈ ವಾರ ಕಿಚ್ಚನ ಪಂಚಾಯ್ತಿಗೆ ಸುದೀಪ್ ಬರಲ್ಲ..! ಕಿಚ್ಚನ ಪಂಚಾಯ್ತಿಗೆ ಶೃತಿ ಎಂಟ್ರಿ..!

Published : Dec 24, 2023, 09:33 AM IST

ಬಿಗ್ ಬಾಸ್ ಸೀಸನ್ 10 ಈಗ 80ನೇ ದಿನಕ್ಕೆ ಸಮೀಪಿಸುತ್ತಿದೆ ಒಂದು ವಾರ ಕಳೆದಿದ್ದು, ಈಗೇನಿದ್ದರೂ ಮುಂದೆ ಸೆಮಿಫೈನಲ್‌ಗೆ ಯಾರು ಬರುತ್ತಾರೆ ಎಂಬುದಷ್ಟೇ ಕುತೂಹಲ ಕೆರಳಿಸಿದೆ. 

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ನಮ್ರತಾ‌ ಆಯ್ಕೆಯಾಗಿದ್ದಾರೆ. ಇನ್ನೂ ಈ ವಾರ ಸಂಗೀತಾ, ಪ್ರತಾಪ್, ಸಿರಿ, ತುಕಾಲಿ ಸಂತೋಷ್ , ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇಷ್ಟು ಮಂದಿಯಲ್ಲಿ ಮನೆಯಿಂದ ಹೊರಗೆ ಹೋಗೋದು ಯಾರು ಎಂಬ ಕುತೂಹಲ ವೀಕ್ಷಕರಲ್ಲೂ ಕೂಡ ಮನೆ ಮಾಡಿದೆ. ವಿಕೇಂಡ್‌ನಲ್ಲಿ ಕಿಚ್ಚನನ್ನ ನೋಡೋಕಂತಾನೆ ಇರೋ ಫ್ಯಾನ್ಸ್‌ಗೆ ಈ ಸರ್ತಿ ಸುದೀಪ್ ಕಾಣಿಸೋದಿಲ್ಲ. ಬಿಕಾಸ್ ಬಿಗ್ ಬಾಸ್(Bigg Boss) ಮನೆಯಲ್ಲಿ ಕಿಚ್ಚನ ಪಂಚಾಯಿತಿಗೆ ರಜೆ ಸಿಕ್ಕಿದೆ. ಯಾಕೆಂದರೆ ಕಿಚ್ಚ ಕ್ರಿಕೆಟ್ ಟೂರ್ನಮೆಂಟ್‌ಗೆ(Cricket tournament) ಹೋಗಿದ್ದು, ಇಂದು ಕಿಚ್ಚ ಸುದೀಪ್(Sudeep) ಅವರು ನ್ಯಾಯ ಪಂಚಾಯಿತಿ ತೀರ್ಮಾನ ಮಾಡಲು ಬಂದಿಲ್ಲ. ಆದರೆ ಇಲ್ಲಿಗೆ ಯಾರು ಬರುತ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ಉತ್ತರ ಸಿಕ್ಕದೆ. ನಟಿ ಹಾಗೂ ಬಿಗ್ ಬಾಸ್ ವಿನ್ನರ್ ಶೃತಿ ಅವರು ಬಿಗ್ ಬಾಸ್ ಮನೆಗೆ ಕೊಟ್ಟಿದ್ದಾರೆ. ಈಗ ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದ್ದು ಶೃತಿ ಜಡ್ಜ್ ಆಗಿ ಆಗಮಿಸಲಿದ್ದಾರೆ. ಇಂದು ಶೃತಿಯೇ ಬಿಗ್ ಬಾಸ್ ಮನೆಯಲ್ಲಿ ನ್ಯಾಯ ತೀರ್ಮಾನ ಮಾಡಲಿದ್ದಾರೆ. ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದಿದೆ. ಇಂದು ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದೆ. ಸ್ಪರ್ಧಿಗಳು ಮಾಡಿರುವ ತಪ್ಪಿಗೆ ನ್ಯಾಯವನ್ನು ನೀಡಲು ಶೃತಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಇಷ್ಟು ದಿನ ಒಂದು ಪ್ರಶ್ನೆಗೆ ಉತ್ತರ ದೊರಕಬೇಕಾಗಿತ್ತು ಆ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಎಲ್ಲಿಯೂ ಕೂಡ ಕೇಳಿರಲಿಲ್ಲ‌. ವೀಕ್ಷಕರು ಮಾತ್ರ ಪದೇ ಪದೇ ವಿನಯ್ ಕಿಚ್ಚ ಸುದೀಪ್ ಬಂದಾಗ ಸೈಲೆಂಟಾಗಿ ಇರುತ್ತಾರೆ ಎಂದು ಪ್ರಶ್ನೆಯನ್ನು ಹೊರ ಹಾಕುತ್ತಲೇ ಇದ್ದರೂ. ಆ ಪ್ರಶ್ನೆಗೆ ಇಂದು ಉತ್ತರ ಸಿಕ್ಕುವ ಸಮಯ ಬಂದಿದೆ. ಇನ್ನೇನಿದ್ದರೂ ಸೆಮಿ ಫೈನಲ್ ಗೆ ನಾಲ್ಕು ವಾರಗಳು ಇದ್ದು ಮನೆಯಿಂದ ಇನ್ಮುಂದೆ ಎರಡರಿಂದ ಮೂರು ಮಂದಿ ನಾಮಿನೇಟ್ ಆಗುತ್ತಾರೆ. ಕೊನೆಗೆ ಐವರಿಂದ ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಅದರಲ್ಲಿ ಮೂರು ಮಂದಿ ಉಳಿದುಕೊಂಡು ರನ್ನರ್ ಆಫ್ ಹಾಗೂ ವಿಜೇತರನ್ನ ಘೋಷಣೆ ಮಾಡಲಾಗುತ್ತದೆ.

ಇದನ್ನೂ ವೀಕ್ಷಿಸಿ:  ಮೊದಲ ದಿನ 95 ಕೋಟಿ + ಗಳಿಸಿದ ಸಲಾರ್..! 35 ಕೋಟಿಗಳಿಸಿ ಸೋತು ಸುಣ್ಣವಾದ ಡಂಕಿ..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!