James 2022: ರಾಜ್ಯದ ಜನತೆಗೆ ಪುನೀತ್ ರಾಜ್‌ಕುಮಾರ್ ದಿನದ ಸಂಭ್ರಮ!

James 2022: ರಾಜ್ಯದ ಜನತೆಗೆ ಪುನೀತ್ ರಾಜ್‌ಕುಮಾರ್ ದಿನದ ಸಂಭ್ರಮ!

Published : Mar 19, 2022, 07:55 PM IST

ರಾಜ್ಯಾದ್ಯಂತ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ ಚಿತ್ರದ ಬಿಡುಗಡೆ ಸಂಭ್ರಮ.

ರಾಜ್ಯಾದ್ಯಂತ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ (Birthday), ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ (James) ಚಿತ್ರದ ಬಿಡುಗಡೆ ಸಂಭ್ರಮ. ಎರಡು ಸಂಭ್ರಮಗಳನ್ನು ಹಲವಾರು ಸಂಘಟನೆಗಳು, ಅಭಿಮಾನಿಗಳು (Fans) ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಮರಣೀಯವಾಗಿ ಆಚರಿಸಿದರು. ನಗರದ ಆಟೋ ನಿಲ್ದಾಣ, ಪ್ರಮುಖ ವೃತ್ತ, ಬೀದಿ ಬೀದಿಯಲ್ಲೂ ಅಭಿಮಾನಿಗಳ ಆರಾಧ್ಯದೈವ ಅಪ್ಪು ಅವರ ಭಾವಚಿತ್ರ ಕಟೌಟ್‌, ಫ್ಲೆಕ್ಸ್‌ ಹಾಕಿ, ಹೂ, ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸಂಭ್ರಮಪಟ್ಟರು.

James 2022: ಅಮೆರಿಕಾದಲ್ಲೂ ಪುನೀತ್ ರಾಜ್‌ಕುಮಾರ್ ಚಿತ್ರದ ದರ್ಬಾರ್

ದೇವಾಲಯದಲ್ಲಿ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಕ್ತದಾನ ಶಿಬಿರ, ಅಂಗಾಗ ದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಹಿ ಹಂಚಿಕೆ, ಅನ್ನದಾನ ಏರ್ಪಡಿಸಲಾಗಿತ್ತು. ಗುರುವಾರ ಮಧ್ಯರಾತ್ರಿ 12 ಆಗುತ್ತಿದ್ದಂತೆ ಅಭಿಮಾನಿಗಳು ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿದರು. ಅಪ್ಪು ಭಾವಚಿತ್ರವಿರುವ ಕನ್ನಡ ಧ್ವಜವನ್ನು ಆಟೋ, ಲಾರಿ ಸೇರಿದಂತೆ ಇನ್ನಿತರೆ ವಾಹನಗಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ನಗರದ ವೀರಭದ್ರೇಶ್ವರ ಚಿತ್ರಮಂದಿರದ ಮುಂದೆ ಸುಮಾರು ಒಂದು ಸಾವಿರ ಅಭಿಮಾನಿಗಳಿಗೆ ಚಿಕನ್‌ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ಪುನೀತ್ ಹುಟ್ಟುಹಬ್ಬ ಹಾಗೂ 'ಜೇಮ್ಸ್' ಸಂಭ್ರಮವನ್ನು ಅಭಿಮಾನಿಗಳು ಹೇಗೆ ಬರಮಾಡಿಕೊಂಡರು ಎಂಬುದನ್ನು ನೋಡಲು ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more