ಚಾಮುಂಡೇಶ್ವರಿಗೆ ನಮಿಸಿದ ಶಿವರಾಜ್​ ಕುಮಾರ್ ದಂಪತಿ: ವಿಶೇಷ ಪೂಜೆ ಸಲ್ಲಿಕೆ

ಚಾಮುಂಡೇಶ್ವರಿಗೆ ನಮಿಸಿದ ಶಿವರಾಜ್​ ಕುಮಾರ್ ದಂಪತಿ: ವಿಶೇಷ ಪೂಜೆ ಸಲ್ಲಿಕೆ

Published : Jul 04, 2025, 02:22 PM IST

ನಟ ಡಾ. ಶಿವರಾಜ್​ಕುಮಾರ್ ದಂಪತಿ ಮೈಸೂರಿಗೆ ತೆರಳಿದ್ದಾರೆ. ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಟ ಡಾ. ಶಿವರಾಜ್​ಕುಮಾರ್ ದಂಪತಿ ಮೈಸೂರಿಗೆ ತೆರಳಿದ್ದಾರೆ. ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್‌ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಆಪರೇಷನ್ ಆದ ಬಳಿಕ ಶಿವಣ್ಣ ದೇವಸ್ಥಾನಗಳಿಗೂ ಹೋಗಿ ಬರುತ್ತಿದ್ದಾರೆ. ಇದೇ ಜುಲೈ 12ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬ ಇದ್ದು, ನೆಚ್ಚಿನ ಜನ್ಮದಿನ ಸೆಲೆಬ್ರೇಷನ್​ಗೆ ಫ್ಯಾನ್ಸ್​​​ ಸಿದ್ಧತೆ ಮಾಡುತ್ತಿದ್ದಾರೆ,

ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌: ಗೋಲ್ಡನ್‌ ಸ್ಟಾರ್‌ ಗಣೇಶ್‌ ಇಂದು ಹುಟ್ಟುಹಬ್ಬ. ಮಳೆ ಹುಡ್ಗನ ಬರ್ತಡೇ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಆಗಿದೆ. ನಿರ್ದೇಶಕ ಚೇತನ್‌ ಕುಮಾರ್‌ ಗಣೇಶ್‌ ಜೊತೆ ಮುಂದಿನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸದ್ಯ ಗಣೇಶ್‌ ಪಿನಾಕಾ, Yours Sincerely Raam ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಟರ್ ಅರಸು ಅಂತಾರೆ ನಿರ್ದೇಶನದ ಚಿತ್ರವನ್ನು ಗಣೇಶ್  ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸಲಿದ್ದಾರೆ. ಈ ಸಿನಿಮಾವನ್ನ ಅಯೋಗ್ಯ2 ಸಿನಿಮಾ ನಿರ್ಮಾಪಕ ಮುನೇಗೌಡ ಗಣೇಶ್​​ ಚೇತನ್ ಕಾಂಬಿನೇಷನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ ನಟ ಕೋಮಲ್: ನಟ ಕೋಮಲ್ ಕುಮಾರ್ ಮತ್ತೆ ಬಿಗ್​ ಸ್ಕ್ರೀನ್​ ಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಈ ಭಾರಿ ಕೋಮಲ್​ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನೋ ಸಿನಿಮಾದಲ್ಲಿ ಸೂಪರ್​ ಮ್ಯಾನ್ ಹೀರೋ ಆಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿ ಈ ಸಿನಿಮಾದ ಟೈಟಲ್​, ಪೋಸ್ಟರ್​ ಹಾಗು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸಂಗೀತಾ ಬಾರ್ ಆಂಡ್ ರೆಸ್ಟೋರೆಂಟ್​​ನಲ್ಲಿ ನಟ ಕೋಮಲ್​ ಜೊತೆ ಬಿಗ್​ಬಾಸ್ ಖ್ಯಾತಿಯ ಅನುಷಾ ರೈ ಹಾಗು ಮೇಘನಾ ರಾಜ್ ನಟಿಸುತ್ತಿದ್ದಾರೆ. ಸಂದೇಶ್​ ಶೆಟ್ಟಿ ಆಜ್ರಿ ಸಂಗೀತಾ ಬಾರ್ ಆ್ಯಂಡ್​ ರೆಸ್ಟೋರೆಂಟ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಆಕ್ಷನ್ ಥ್ರಿಲ್ಲರ್  "ಫೀನಿಕ್ಸ್" ಟೀಸರ್ ಬಿಡುಗಡೆ: 'ಫೀನಿಕ್ಸ್' ಗ್ರೀಕ್ ಮೂಲದ ಒಂದು ಕಾಲ್ಪನಿಕ ಪಕ್ಷಿ. ಅದು ಭಸ್ಮವಾದರೂ ಮತ್ತೆ ಎದ್ದು ಬರುತ್ತೆ ಎಂದು ಹೇಳುತ್ತಾರೆ. ಅಂಥದೇ ಕಂಟೆಂಟ್ ಇಟ್ಟುಕೊಂಡು ಕನ್ನಡದಲ್ಲಿ ತಯಾರಾದ ಸಿನಿಮಾ ಫೀನಿಕ್ಸ್. ಹೊಸೂರು ವೆಂಕಟ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಕಲಾವಿಧರ ಸಂಘದಲ್ಲಿ ಸುದ್ದಿಗೋಷ್ಟಿ ಮಾಡಿ ಸಿನಿಮಾದ ಆಡಿಯೋ, ಟೀಸರ್ ಬಿಡುಗಡೆ ಮಾಡಿದ್ದಾರೆ. ಹೊಸೂರು ಶ್ರೀನಿವಾಸ್‌ ಸಿ. ನಿರ್ಮಿಸಿರೋ ಫಿನಿಕ್ಸ್​ ಸಿನಿಮಾದಲ್ಲಿ ನಾಯಕನಾಗಿ ಪ್ರತಾಪ್ ಸಿಂಹ ನಟಿಸಿದ್ದು, ರಕ್ಷಿತಾ ಹಾಗು ಖುಷಿ ನಾಯಕಿಯಾಗಿದ್ದಾರೆ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more