ಅಯೋಗ್ಯ ಸಕ್ಸಸ್ ಜೋಡಿಯ ಮ್ಯಾಟ್ನಿ: ಸಂಜೆ ಮೇಲೆ ಸುಮ್ನೇ ಹಂಗೆ ಫೋನ್‌ ಮಾಡ್ಲಾ ಅಂತಿದ್ದಾರೆ ಸತೀಶ್‌

ಅಯೋಗ್ಯ ಸಕ್ಸಸ್ ಜೋಡಿಯ ಮ್ಯಾಟ್ನಿ: ಸಂಜೆ ಮೇಲೆ ಸುಮ್ನೇ ಹಂಗೆ ಫೋನ್‌ ಮಾಡ್ಲಾ ಅಂತಿದ್ದಾರೆ ಸತೀಶ್‌

Published : Aug 05, 2023, 10:08 AM IST

ಸತೀಶ್‌, ರಚಿತಾಗೆ ಸಂಜೆ ಮೇಲೆ ಫೋನ್ ಮಾಡ್ಲಾ ಎನ್ನುವ ಹಾಡು ಇದೀಗ ರಿಲೀಸ್ ಆಗಿದೆ. ಈ ಹಾಡನ್ನು ನೋಡಿರುವ ಸಿನಿರಸಿಕರು ಮುದ್ದಾಗಿದೆ ಜೋಡಿ ಅಂತಿದ್ದಾರೆ.

ಅಯೋಗ್ಯ ಹಿಟ್ ಜೋಡಿ ಮತ್ತೆ ಒಂದಾಗಿದೆ. ರಚಿತಾ ಸತೀಶ್‌ ನೀನಾಸಂ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯೆಸ್ ಮ್ಯಾಟ್ನಿ(Matinee) ಎನ್ನುವ ಹೊಸ ಚಿತ್ರದಲ್ಲಿ ಎರಡನೇ ಬಾರಿಗೆ ಈ ಜೋಡಿ ಒಂದಾಗಿದೆ. ಸಿನಿಮಾದ ಕಲರ್ ಫುಲ್ ಫೋಟೋ ಶೂಟ್ ಕೂಡ ಆಗಿದೆ. ಸತೀಶ್‌, ರಚಿತಾಗೆ ಸಂಜೆ ಮೇಲೆ ಫೋನ್ ಮಾಡ್ಲಾ ಅಂತಿದ್ದಾರೆ. ಈ ಹಾಡು (Song) ಇದೀಗ ರಿಲೀಸ್ ಆಗಿದ್ದು, ಮುದ್ದಾಗಿದೆ ಜೋಡಿ ಅಂತಿದ್ದಾರೆ ಸಿನಿರಸಿಕರು. ಸತೀಶ್‌ ರಚಿತಾ ( Rachita Ram) ಜೋಡಿಯ ಏನಮ್ಮಿ ಹಾಡು ಸಖತ್ ಹಿಟ್ಟಾಗಿತ್ತು. ಇದೀಗ  ಮ್ಯಾಟ್ನಿ ಸಿನಿಮಾದ ಈ ಹೊಸ ಹಾಡು ರಿಲೀಸ್ ಆಗಿದೆ. ಈ ಕುರಿತು ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸಿನಿಮಾದ ಅಪ್ ಡೇಟ್ ನೀಡಿದೆ. ಮ್ಯಾಟ್ನಿ ಸಿನಿಮಾಗೆ ಮನೋಹರ್ ಕಂಪಳ್ಳಿ ನಿರ್ದೇಶನ ಮಾಡಿದ್ದು, ಸದ್ಯ ರಿಲೀಸ್ ಮಾಡಲಿರುವ ಹಾಡನ್ನು 15 ದಿನಗಳ ಕಾಲ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಈ ಹಾಡಿಗಾಗಿ ನಿನಾಸಂ ಸತೀಶ್ (Actor Satish Ninasam) ಅವರು ವರ್ಕೌಟ್ ಮಾಡಿ, ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದರೆ, ನಟಿ ರಚಿತಾ ರಾಮ್ ಸಿಂಗಲ್ ಪೀಸ್ ಮಿನಿ ಹಾಕಿಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಡಾನ್ಸ್ ಮಾಸ್ಟರ್ ಸಂತೋಷ್ ಒಳ್ಳೆ ಕೋರಿಯೋಗ್ರಾಫಿನೇ ಮಾಡಿದ್ದಾರೆ. ಇಡೀ ಹಾಡಿನಲ್ಲಿ ಒಳ್ಳೆ ಫೀಲ್ ಇದೆ. ಅದಕ್ಕೂ ಹೆಚ್ಚಾಗಿ ಈ ಹಾಡಿನಲ್ಲಿ ಒಂದು ರೋಮ್ಯಾಂಟಿಕ್ ಫೀಲ್ ಇದೆ. ಅದನ್ನ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಚೆನ್ನಾಗಿಯೇ ಕ್ಯಾರಿ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿ ಬಂದಿರೋ ಈ ಗೀತೆಯನ್ನ ವಿಜಯ್ ಪ್ರಕಾಶ್ ಅವರೇ ಹಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಮೀನಾ ರಾಶಿಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.. ಪರಿಹಾರಕ್ಕೆ ಇದನ್ನ ಪರಿಸಿ

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more