'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!

'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!

Published : Nov 07, 2025, 05:31 PM IST

ಬಣ್ಣದ ಜಗತ್ತು ಕಾಸ್ಟ್ರಿಂಗ್ ಕೌಚ್​ಸುದ್ದಿಗಳಿಗೆ ಹಬ್ ಇದ್ದಂತೆ. ಯಾವ ನಟಿಯನ್ನ ಕೇಳಿದ್ರು ಹೇಳೊದು ಒಂದೇ ಮಾತು. ಮಂಚಕ್ಕೆ ಕರಿತಾರೆ, ನಾವು ಹೇಗಿರುತ್ತೇವೆ ಅನ್ನೋದರ ಮೇಲೆ ನಮ್ಮ ಸಿನಿಮಾ ಭವಿಷ್ಯ ಇರುತ್ತೆ ಅಂತ. ಈಗ 'ಕಿರಿಕ್ ಪಾರ್ಟಿ' ನಟಿ ಸಂಯುಕ್ತಾ ಹೆಗ್ಡೆ ಏನ್ ಹೇಳಿದಾರೆ ನೋಡಿ..

ಸಂಯುಕ್ತಾ ಹೆಗ್ಡೆ ಮಾತೇನು?

ಬಣ್ಣದ ಜಗತ್ತು ಕಾಸ್ಟ್ರಿಂಗ್ ಕೌಚ್​ಸುದ್ದಿಗಳಿಗೆ ಹಬ್ ಇದ್ದಂತೆ. ಈ ವಿಷ್ಯದಲ್ಲಿ ಯಾವ ನಟಿಯನ್ನ ಕೇಳಿದ್ರು ಹೇಳೊದು ಒಂದೇ ಮಾತು. ಮಂಚಕ್ಕೆ ಕರಿತಾರೆ, ನಾವು ಹೇಗಿರುತ್ತೇವೆ ಅನ್ನೋದರ ಮೇಲೆ ನಮ್ಮ ಸಿನಿಮಾ ಭವಿಷ್ಯ ಇರುತ್ತೆ ಅಂತ. ಈಗ 'ಕಿರಿಕ್ ಪಾರ್ಟಿ' ಸಿನಿಮಾ ಬ್ಯೂಟಿ ಸಂಯುಕ್ತಾ ಹೆಗ್ಡೆ (Samyukta Hegde) ಕೂಡ ಸಿನಿಮಾ ರಂಗದ ಮಂಚದ ಮರ್ಮವನ್ನ ಜಗತ್ತಿನ ಮುಂದೆ ಹೇಳಿದ್ದಾರೆ..? ಹಾಗಾದ್ರೆ ಸಂಯುಕ್ತಾ ಕೊಟ್ಟ ಆ ಸ್ಟೇಟ್ಮೆಂಟ್ ಏನು..? ಈಕೆ ಸಿನಿ ಭವಿಷ್ಯದ ಮೇಲೆ ಕಾಸ್ಟಿಂಗ್ ಕೌಚ್ ಹೇಗೆ ಪ್ರಭಾವ ಬೀರಿದೆ.? ನೋಡೋಣ ಬನ್ನಿ..

ಬಣ್ಣದ ಲೋಕದಲ್ಲಿ ನಟಿಯರ ಪಲ್ಲಂಗದ ಕಥೆಗಳನ್ನ ಏಷ್ಯಾನೆಟ್ ಸುವರ್ಣ ನ್ಯೂಸ್​ ಇತ್ತೀಚೆಗಷ್ಟೆ ಸ್ಟಿಂಗ್ ಮಾಡಿ ರಿವಿಲ್ ಮಾಡಿತ್ತು. ಹಣದ ಆಸೆಗೆ ಕೆಲ ನಟಿಯರು ಪಲ್ಲಂಗ ಏರೋಕೆ ಹೇಗೆ ರೆಡಿ ಎನ್ನುತ್ತಾರೆ ಅನ್ನೋದು ಜಗತ್ ಜಾಹೀರಾತಾಗಿತ್ತು. ಇದೊಂದು ವರ್ಷನ್ ಆದ್ರೆ ಮತ್ತೊಂದು ರೂಪವೂ ಇದೆ. ಅದು ನಟಿಯರನ್ನ ಕಾಸ್ಟಿಂಗ್ ಕೌಚ್​ ಬಲೆಯಲ್ಲಿ ಬೀಳಿಸಿ ಸಿನಿಮಾ ಅವಕಾಶ ಕೊಡೋದು ಈ ಬಗ್ಗೆ ಕಿರಿಕ್ ಪಾರ್ಟಿ ಸಿನಿಮಾದ ನಟಿ ಸಂಯುಕ್ತಾ ಹೆಗ್ಡೆ ಬಾಯ್ಬಿಟ್ಟಿದ್ದಾರೆ

ಯೆಸ್, ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನ ಕೆಲ ನಟಿಯರು ಆಗಾಗ ನಿಮ್ಗೆ ಮಾಡ್ತಾನೆ ಇರುತ್ತಾರೆ. ಈಗ ಸಂಯುಕ್ತಾ ಹೆಗ್ಡೆ ಬಣ್ಣದ ಜಗತ್ತಿನ ಮಂಚದ ಮರ್ಮವನ್ನ ಬಿಚ್ಚಿಟ್ಟಿದ್ದಾರೆ. ನೀವೇ ನಾಯಕಿ ಮಲಗೋಣ ಬಾ ಅಂತ ಕರಿತಾರೆ ಅನ್ನೋ ವಿಷಯವನ್ನ ಓಪನ್ ಆಗಿ ಹೇಳಿದ್ದಾರೆ ಸಂಯುಕ್ತಾ..

ಚಿತ್ರರಂಗದಲ್ಲಿ ತುಂಬಿ ತುಳುಕುತ್ತಿದ್ದಾರಾ ಕಾಮಾಂಧರು..?
ಸಂಯಕ್ತಾ ಹೆಗ್ಡೆ ಚಿತ್ರರಂಗಕ್ಕೆ ಬಂದು ಒಂದು ದಶಕ ಆಗುತ್ತಿದೆ. ಇಷ್ಟು ವರ್ಷದಲ್ಲಿ ಸಂಯುಕ್ತ ಕನ್ನಡದಲ್ಲಿ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಆದ್ರೆ, ''ಕಿರಿಕ್ ಪಾರ್ಟಿ''ಯಲ್ಲಿ ಇವರಿಗೆ ಸಿಕ್ಕ ಹೆಸರು ಬೇರೆ ಯಾವ ಚಿತ್ರದಲ್ಲೂ ಸಿಗಲಿಲ್ಲ ಇಂಥಾ ಸಂಯುಕ್ತಾ ಹೆಗ್ಡೆ ಸದ್ಯ ಮತ್ತೊಮ್ಮೆ ತಮ್ಮ ಬದುಕಿನ ಪ್ರಮುಖ ಪುಟಗಳನ್ನು ತಿರುವಿ ಹಾಕಿದ್ದು, ಚಿತ್ರರಂಗದಲ್ಲಿ ಕಾಮುಕರು ಹೇಗೆ ತುಂಬಿ ತುಳುಕುತ್ತಿದ್ದಾರೆ, ಹೇಗೆಲ್ಲಾ ಕಾಡುತ್ತಾರೆ ಅಂತ ಹೇಳಿದ್ದಾರೆ.

ಸಂಯುಕ್ತಾ ಹೆಗ್ಡೆ ಹೇಳೋ ಪ್ರಕಾರ ಒಂದು ಚಿತ್ರಕ್ಕೆ ಒಬ್ಬಳು ನಾಯಕಿ ಆಯ್ಕೆಯಾಗಿದ್ದಾಳೆ ಎಂದು ಅಂದುಕೊಳ್ಳಿ, ಇನ್ನೇನು ಕೆಲ ದಿನಗಳಲ್ಲಿ ಆ ಚಿತ್ರದ ಚಿತ್ರೀಕರಣ ಶುರುವಾಗಬೇಕಿರುತ್ತೆ. ನೀವೇ ನಾಯಕಿ ಎಂದು ಘೋಷಣೆ ಆಗಿರುತ್ತೆ. ಆದ್ರೆ ಕೆಲವರು ಅವಕಾಶ ಕೊಟ್ಟಿದ್ದಕ್ಕೆ ಋಣ ಸಂದಾಯ ಮಾಡುವಂತೆ ಕೇಳುತ್ತಾರೆ ಎಂದಿದ್ದಾರೆ. ಮೊದಲೆಲ್ಲಾ ರಾಜಿ.. ಕಾಂಪ್ರಮೈಸ್‌.. ಎಂಬ ಶಬ್ದ ಬಳಸುತ್ತಿದ್ರು, ಅದ್ರೆ ಈಗ ಮಾನ ಮರ್ಯಾದೆ ನಾಚಿಕೆ ಇಲ್ಲದೇ ನೇರವಾಗಿಯೇ ಈಗ ಬನ್ನಿ ನಮ್ಮ ಜೊತೆ ಮಲಗಿ ಎಂದು ಕೇಳುತ್ತಾರೆ. ಚಿತ್ರದ ಚಿತ್ರೀಕರಣ ಇರಲಿ.. ಇಲ್ಲದಿರಲಿ.. ನಮ್ಮ ಜೊತೆ ನೀವು ಸಮಯ ಕಳೆಯಬೇಕು ಎಂದು ಹೇಳುತ್ತಾರೆ ಅನ್ನೋ ಸತ್ಯವನ್ನ ಬಾಯ್ಬಿಟ್ಟಿದ್ದಾರೆ ಸಂಯುಕ್ತಾ.

ಸಮೀರ್ ಆಚಾರ್ಯ ಕಪಾಳಕ್ಕೆ ಬಾರಿಸಿದ್ದು

ಸಂಯುಕ್ತಾ ಹೆಗಡೆ.. ''ಕಿರಿಕ್ ಪಾರ್ಟಿ'' ಚಿತ್ರದ ಮೂಲಕ ಚಂದನವನಕ್ಕೆ ಬಂದ ಚೆಂದುಳ್ಳಿ ಚೆಲುವೆ. ಮೊದಲ ಚಿತ್ರದಲ್ಲಿಯೇ ಇವರಿಗೆ ಬೇಕಿದ್ದ ಗೆಲುವು ಮತ್ತು ಕೀರ್ತಿ ಎರಡು ಸಿಕ್ಕಿತ್ತು. ಆದರೆ.. ಆ ನಂತರ ಇವರು ಸದ್ದು ಮಾಡಿದ್ದು ಸುದ್ದಿಯಾಗಿದ್ದು ಥರ ಥರದ ಕಿರಿಕ್ಕುಗಳಿಂದಲೇ. ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯ ಕಪಾಳಕ್ಕೆ ಬಾರಿಸಿದ್ದು, ಉಡುಗೆ ತೊಡುಗೆಯ ವಿಚಾರಕ್ಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿ ಸೋಷಿಯಲ್ ಮೀಡಿಯಾ ಬಾಯಿಗೆ ತಾಂಬೂಲ ಆಗ್ತಾನೆ ಇರುತ್ತಾರೆ. ಈಗ ಬಣ್ಣದ ಜಗತ್ತಿನ ಮಂಚದ ಕಥೆಗಳನ್ನ ಹೇಳುತ್ತಾ ಮತ್ತೆ ಎಲ್ಲರ ಕಣ್ಣು ತನ್ನ ಮೇಲೆ ಬೀಳುವಂತೆ ಮಾಡಿದ್ದಾರೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more