ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೇ ಸಿನಿಮಾ 'ಜೇಮ್ಸ್' ಚಿತ್ರದ 'ಸಲಾಂ ಸೋಲ್ಜರ್..' ಹಾಡಿನ ಲಿರಿಕಲ್ ವಿಡಿಯೋ ಮಾರ್ಚ್ 11ರಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಬಿಡುಗಡೆಯಾಗಲಿದೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೇ ಸಿನಿಮಾ 'ಜೇಮ್ಸ್' ಬಗ್ಗೆ ಅಭಿಮಾನಿಗಳು ಇನ್ನಿಲ್ಲದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾರ್ಚ್ 17ರ ಅಪ್ಪು ಜನ್ಮದಿನದಂದು ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ.ಇತ್ತೀಚೆಗಷ್ಟೇ ಚಿತ್ರದ 'ಟ್ರೇಡ್ಮಾರ್ಕ್..' (Trademark) ಲಿರಿಕಲ್ ವಿಡಿಯೋ ಸಖತ್ ಸೌಂಡು ಮಾಡಿತ್ತು. ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ 'ಜೇಮ್ಸ್' ತಂಡ. ಹೌದು! ಚಿತ್ರದ 'ಸಲಾಂ ಸೋಲ್ಜರ್..' (Salaam Soldier) ಹಾಡಿನ ಲಿರಿಕಲ್ ವಿಡಿಯೋ ಮಾರ್ಚ್ 11ರಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಬಿಡುಗಡೆಯಾಗಲಿದೆ.
James 2022: ಪುನೀತ್ 'ಜೇಮ್ಸ್' ಜಾತ್ರೆಗೆ ಸಿದ್ಧವಾಗಿದೆ ದೊಡ್ಡ ಪ್ಲಾನ್
'ಏಕಕಾಲಕ್ಕೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ ಆಗುತ್ತಿದೆ. ಹೊರ ದೇಶಗಳಲ್ಲೂ ಸಿನಿಮಾದ ದರ್ಶನ ಆಗುತ್ತಿದೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ (Kishore Pathikonda) ಬಂಡವಾಳ ಹೂಡಿದ್ದಾರೆ. ಇನ್ನು ಪುನೀತ್ ಪಾತ್ರಕ್ಕೆ ಅವರ ಸಹೋದರ ಶಿವರಾಜ್ಕುಮಾರ್ (Shivarajkumar) ಡಬ್ ಮಾಡಿದ್ದಾರೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies