ಅಕ್ಕನ ಕೈ ರುಚಿ ತುಂಬಾ ಇಷ್ಟ, ಅಪ್ಪು ನೆನೆದು ಭಾವುಕರಾದ ರಾಜ್ ಪುತ್ರಿ

Nov 16, 2021, 11:19 AM IST

ಅಪ್ಪು(Appu) ಅಕ್ಕನ ಬೆನ್ನು ಹತ್ತುತ್ತಿದ್ದರಂತೆ, ಮುದ್ದಿನ ತಮ್ಮನ ಕಥೆಯನ್ನು ಅಕ್ಕ ಲಕ್ಷ್ಮಿ ಬಿಚ್ಚಿಟ್ಟಿದ್ದಾರೆ. ಆ ರೆಸಿಪಿ ಹೇಳು, ಮನೆಗೆ ಬಂದಾಗ ನಾನೆ ಮಾಡಿಕೊಡ್ತೀನಿ ಎಂದು ಅಕ್ಕನ ಬಳಿ ರೆಸಿಪಿಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು ಅಪ್ಪು. ಹಿರಿಯಕ್ಕ ಅಂದ್ರೆ ಪುನೀತ್‌ಗೆ ತುಂಬಾ ಇಷ್ಟ. ಸಿಕ್ಕಾಪಟ್ಟೆ ಹಠ ಮಾಡಿದರೆ ಅಪ್ಪುಗೆ ನೋ ಹೇಳುತ್ತಲೇ ಇರಲಿಲ್ಲ ಲಕ್ಷ್ಮಿ ಅಕ್ಕ.

Puneeth Rajkumar; ಚಿತ್ರ ರಂಗದಿಂದ ಇಂದು ಪುನೀತ್‌ ಗೀತ ನಮನ, ದೇಶದ ಸಿನಿ ರಂಗ 2,000 ಕಲಾವಿದರು ಭಾಗಿ

ಅಕ್ಕನ ಕೈರುಚಿ ಅಂದ್ರೆ ಭಾರೀ ಇಷ್ಟ ಪುನೀತ್‌ಗೆ(Puneeth Rajkumar). ಚಿಕ್ಕ ಮಗುವನ್ನು ನೋಡಿಕೊಂಡಂತೆಯೇ ಅಪ್ಪುನನ್ನು ಸ್ನಾನ ಮಾಡಿಸಿ, ಬಟ್ಟೆ ಹಾಕಿಸಿ ಮುದ್ದು ಮಾಡಿ ನೋಡಿಕೊಳ್ಳುತ್ತಿದ್ದರು ಲಕ್ಷ್ಮಿ ಅಕ್ಕ. ಪುನೀತ್ ಸಾವಿನ ಸುದ್ದಿ ಕೇಳಿ ನೆಲದ ಮೇಲೆ ಬಿದ್ದು ಹೊರಳಾಡಿದ್ದರು ಲಕ್ಷ್ಮಿ. ತಮ್ಮನ ಮೃತದೇಹದ ಪಕ್ಕ ದಿಗ್ಭ್ರಮೆಯಲ್ಲಿ ಕುಳಿತಿದ್ದೆ ಎಂದು ಭಾವುಕರಾದ ಅಪ್ಪು ಅಕ್ಕ.