ಈ ಸಿನಿಮಾಗೆ ನಟರೂ ಬೇಡ.. ತಂತ್ರಜ್ಞರೂ ಬೇಡ: ಇದು ಕನ್ನಡ ಚಿತ್ರರಂಗಕ್ಕೆ ಹಿರಿಮೆ!

ಈ ಸಿನಿಮಾಗೆ ನಟರೂ ಬೇಡ.. ತಂತ್ರಜ್ಞರೂ ಬೇಡ: ಇದು ಕನ್ನಡ ಚಿತ್ರರಂಗಕ್ಕೆ ಹಿರಿಮೆ!

Published : Apr 17, 2025, 05:15 PM ISTUpdated : Apr 17, 2025, 05:18 PM IST

ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಎಂಟ್ರಿ ಕೊಡ್ತಾ ಇದೆ. ನಮ್ಮ ಸಿನಿಮಾರಂಗಕ್ಕೂ ಎಐ ಎಂಟ್ರಿ ಕೊಟ್ಟಾಗಿದೆ. ಎಐ ಟೆಕ್ನಾಲಜಿಯನ್ನ ಬಿಡಿಬಿಡಿಯಾಗಿ ಅನೇಕ ಸಿನಿಮಾಗಳು ಬಳಸಿಕೊಂಡಿವೆ. ಆದ್ರೆ ಇಲ್ಲೊಬ್ರು ಸಂಪೂರ್ಣ ಎಐ ಬಳಸಿ ಇಡಿ ಸಿನಿಮಾ ರೆಡಿ ಮಾಡಿದ್ದಾರೆ.
 

ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಎಂಟ್ರಿ ಕೊಡ್ತಾ ಇದೆ. ನಮ್ಮ ಸಿನಿಮಾರಂಗಕ್ಕೂ ಎಐ ಎಂಟ್ರಿ ಕೊಟ್ಟಾಗಿದೆ. ಎಐ ಟೆಕ್ನಾಲಜಿಯನ್ನ ಬಿಡಿಬಿಡಿಯಾಗಿ ಅನೇಕ ಸಿನಿಮಾಗಳು ಬಳಸಿಕೊಂಡಿವೆ. ಆದ್ರೆ ಇಲ್ಲೊಬ್ರು ಸಂಪೂರ್ಣ ಎಐ ಬಳಸಿ ಇಡಿ ಸಿನಿಮಾ ರೆಡಿ ಮಾಡಿದ್ದಾರೆ. ವಿಶ್ವದ ಮೊಟ್ಟ ಮೊದಲ ಎಐ ಸಿನಿಮಾ ಕನ್ನಡದಲ್ಲಿ ಸಿದ್ದವಾಗಿದೆ. AI  ಟೆಕ್ನಾಲಜಿ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಮೂಡಿಸ್ತಾ ಇದೆ. ಸಿನಿಮಾ ರಂಗಕ್ಕೂ AI ಬಂದಾಗಿದೆ. ಈಗಾಗ್ಲೇ ಅನೇಕ ಸಿನಿಮಾ ತಂಡಗಳು  ಮೇಕಿಂಗ್​ನಲ್ಲಿ ಎಐ ಬಳಕೆ ಮಾಡ್ತಾ ಇವೆ. ಆದ್ರೆ ಇಲ್ಲೊಬ್ರು ಇಡೀ ಸಿನಿಮಾವನ್ನೇ AI ಬಳಕೆ ಮಾಡಿಕೊಂಡು ರೆಡಿಮಾಡಿದ್ದಾರೆ. ‘ಲವ್ ಯು’ ಅನ್ನೋ ಈ ಸಿನಿಮಾವನ್ನ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಲಾಗಿದೆ. ಎಸ್. ನರಸಿಂಹಮೂರ್ತಿ ಈ ಚಿತ್ರದ ನಿರ್ದೇಶಕರು. 

ಇವರ ಕಥೆ ಚಿತ್ರಕಥೆ ಸಂಭಾಷಣೆಯನ್ನ ಬಳಿಸಕೊಂಡು ಎಐ ತಂತ್ರಜ್ಞ ನೂತನ್ ಈ ಚಿತ್ರವನ್ನ ರೆಡಿಮಾಡಿದ್ದಾರೆ. ಇಲ್ಲಿನ ಕಲಾವಿದರು, ಕ್ಯಾಮೆರಾ ವರ್ಕ್, ಮ್ಯೂಸಿಕ್, ಹಾಡುಗಳು ಎಲ್ಲವೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧರಿಸಿ ಮಾಡಲಾಗಿದೆ. 95 ನಿಮಿಷಗಳ ಲವ್ ಯು ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೀತಾ ಇದೆ. ಸೆನ್ಸಾರ್ ಕೂಡ ಮುಗಿಸಿರೋ ಈ ಸಿನಿಮಾ ಯುಐ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಮೇ 2ನೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಗೆ ವಿಶ್ವದ ಮೊದಲ ಎಐ ಸಿನಿಮಾ ನಿರ್ಮಿಸಿದ ಖ್ಯಾತಿ ಸ್ಯಾಂಡಲ್​ವುಡ್​ಗೆ ಸಿಕ್ತಾ ಇದೆ. ಈ ಖ್ಯಾತಿಯ ಖುಷಿ ಜೊತೆಗೆ ಮುಂದಿನ ದಿನಗಳಲ್ಲಿ ಎಐ ಟೆಕ್ನಾಲಜಿ, ಸಿನಿಮಾ ಕಲಾವಿದರ-ತಂತ್ರಜ್ಞರ ಕೆಲಸ ಕಿತ್ತುಕೊಳ್ಳುತ್ತೆ ಅನ್ನೋ ಆತಂಕವೂ ಶುರುವಾಗಿದೆ.

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
Read more