‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಆಲ್ ಇಂಡಿಯಾ ಟ್ರೆಂಡಿಂಗ್!

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಆಲ್ ಇಂಡಿಯಾ ಟ್ರೆಂಡಿಂಗ್!

Published : Jul 01, 2024, 11:26 AM IST

ಗೋಲ್ಡನ್ ಸ್ಟಾರ್ ಗಣೇಶ್ ಈಸ್ ಬ್ಯಾಕ್. ಹೊಸ ಚಿತ್ರ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡು ಇದೀಗ ಫುಲ್ ಟ್ರೆಂಡಿಂಗ್‌ನಲ್ಲಿದೆ.
 

ಆಲ್ ಇಂಡಿಯಾ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಚಿನ್ನಮ್ಮ ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್‌ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದ ಚಿನ್ನ ಚಿನ್ನ ಕಣ್ಗಳ್ ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ಕಲ್ಕಿ 2898 AD ಚಿತ್ರದ ‘ಥೀಮ್ ಆಫ್ ಕಲ್ಕಿ’ ಹಾಡು ಇದೆ. ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು(Chinnamma song) ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ. ಖೈಲಾಶ್ ಖೇರ್ ಮತ್ತು ಇಂದು ನಾಗರಾಜ್ ಹಾಡಿರೋ ಹಾಡಿದು. ಶೇಖರ್ ಮಾಸ್ಟರ್ ಕೊರಿಯಾಗ್ರಫಿ. ಕವಿರಾಜ್ ಸಾಹಿತ್ಯವಂತೂ ಅಧ್ಭುತವಾಗಿದೆ. ಅರ್ಜುನ್ ಜನ್ಯಾ ಸಂಗೀತ ರಾಕಿಂಗ್..ಎನ್ನುತ್ತಿದ್ದಾರೆ ಸಂಗೀತ ಪ್ರಿಯರು. ಗೋಲ್ಡನ್ ಸ್ಟಾರ್ ಗಣೇಶ್ ರ(Ganesh)  ‘ಕೃಷ್ಣಂ ಪ್ರಣಯ ಸಖಿ’(Krishnam Pranaya Sakhi)ರೊಮ್ಯಾಂಟಿಕ್ ಕೌಟುಂಬಿಕ ಕತೆಯೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶ್ರೀನಿವಾಸರಾಜು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಪೋಸ್ಟರ್ ಗಳು ಈಗಾಗಲೇ ಬಿಡುಗಡೆ ಆಗಿ ಮೆಚ್ಚುಗೆಗಳಿಸಿವೆ. ಈ ಹಿಂದೆ ರಿಲೀಸ್ ಆಗಿದ್ದ ಚಂದನ್ ಶೆಟ್ಟಿ ಹಾಡಿದ್ದ ಮೈ ಮ್ಯಾರೇಜ್ ಈ ಫಿಕ್ಸ್ಡ್  ಹಾಡು ಕೂಡ2 ಮಿಲಿಯನ್ಗೂ ಹೆಚ್ಚು ವೀಕ್ಷಣೆಕಂಡಿದೆ. 

ಇದನ್ನೂ ವೀಕ್ಷಿಸಿ:  ಭೀಮ ಸಿನಿಮಾದ ಹೊಸ ಹಾಡಿನ ಸೌಂಡ್! ಡೋಂಟ್ ವರಿ ಬೇಬಿ ಚಿನ್ನಮ್ಮ..ಸಾಂಗ್‌ಗೆ ತಮಟೆ ಏಟು!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!