ಬಾದ್‌ಷಾ ಕಿಚ್ಚ ಸುದೀಪ್ 50ನೇ ಚಿತ್ರವನ್ನು ರಿಷಬ್ ಡೈರೆಕ್ಟ್ ಮಾಡ್ತಾರಾ?

ಬಾದ್‌ಷಾ ಕಿಚ್ಚ ಸುದೀಪ್ 50ನೇ ಚಿತ್ರವನ್ನು ರಿಷಬ್ ಡೈರೆಕ್ಟ್ ಮಾಡ್ತಾರಾ?

Published : Sep 11, 2023, 03:03 PM IST

ಸ್ಯಾಂಡಲ್‌ವುಡ್ ಬಾದ್‌ ಷಾ ಕಿಚ್ಚ ಸುದೀಪ್‌ನ 50ನೇ ಸಿನಿಮಾಗೂ ರೆಡಿ ಆಗಿದ್ಯಂತೆ ಪಕ್ಕಾ ಪ್ಲಾನ್.  ಕಿಚ್ಚನ 50ನೇ ಚಿತ್ರಕ್ಕೆ ಆ ಸ್ಟಾರ್ ಡೈರೆಕ್ಟರ್ ಯಾರು?

27 ವರ್ಷದ ಸಿನಿ ಜರ್ನಿ, ಪಂಚ ಭಾಷಾ ಇಮೇಜ್, 46 ಸಿನಿಮಾಗಳಲ್ಲಿ ಹೀರೋ. ಪ್ಯಾನ್ ಇಂಡಿಯಾ ಸೌಂಡ್ ಮಾಡಿದ ಸಿನಿಮಾಗಳಲ್ಲಿ ಗೆಸ್ಟ್ ಅಪಿರಿಯೆನ್ಸ್. ಪ್ಯಾನ್ ಇಂಡಿಯಾದ ಮಲ್ಟಿ ಟ್ಯಾಲೆಂಟೆಡ್, ಕನ್ನಡದ ಆಲ್ ಇಂಡಿಯಾ ಕಟೌಟ್.. ಹೇಳ್ತಾ ಹೋದರೆ ಮಾಣಿಕ್ಯ ಕಿಚ್ಚ ಸುದೀಪ್ ಗುಣಗಾನ ಮುಗಿಯುವುದೇ ಇಲ್ಲ. ಮೊನ್ನೆಯಷ್ಟೇ 50ನೇ ಹುಟ್ಟು ಹಬ್ಬವನ್ನು ಫ್ಯಾನ್ಸ್ ಜೊತೆ ಸೆಲಬ್ರೇಟ್ ಮಾಡಿಕೊಂಡ ಸುದೀಪ್, ಈಗ ಇನ್ನೊಂದು ಸೆಲೆಬ್ರೇಷನ್ ಮೊಮೆಂಟ್ ಕ್ರಿಯೇಟ್ ಮಾಡೋಕೆ ರೆಡಿ ಆಗ್ತಿದ್ದಾರೆ. 

ಮ್ಯಾಟ್ನೀ ಚಿತ್ರದ ಹಾಡು ಶೂಟಿಂಗ್

ಈಗಾಗ್ಲೇ 46ನೇ ಸಿನಿಮಾ ಮ್ಯಾಕ್ಸ್ ಟೀಸರ್, ಅಭಿಮಾನಿಗಳಿಗಂತೂ ಹಬ್ಬದೂಟ ಅನ್ನೋ ಸೂಚನೆ ಕೊಟ್ಟಿದೆ. ಜೊತೆಗೆ ಸಕತ್ತಾಗಿರೋ ಕಥೆಯೂ ಇದೆ.
47ನೇ ಸಿನಿಮಾ ಡೈರೆಕ್ಟ್ ಮಾಡ್ತಿರೋದು ಚೇರನ್. ಕಿಚ್ಚ ಸುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಮೊದಲ ಸಿನಿಮಾ ಮೈ ಆಟೋಗ್ರಾಫ್ ಚಿತ್ರದ ಒರಿಜಿನಲ್ ಚೇರನ್ ಅವರದ್ದೇ. ತಮಿಳಿನ ಚೇರನ್ ಅವರ ಆಟೋಗ್ರಾಫ್ ಚಿತ್ರವನ್ನೇ ಕನ್ನಡಕ್ಕೆ ತಂದಿದ್ದವರು ಸುದೀಪ್. ಆ ಚಿತ್ರಕ್ಕೆ ತಮಿಳಿನ ಸತ್ಯ ಜ್ಯೋತಿ ಫಿಲಂಸ್ ಪ್ರೊಡಕ್ಷನ್ ಇದೆ. ಅದಾದ ಕೂಡ್ಲೇ 49ನೇ ಸಿನಿಮಾ ಸಿದ್ಧವಾಗುತ್ತಂತೆ. ಕಬ್ಜ ಚಂದ್ರು ಡೈರೆಕ್ಷನ್‌ನಲ್ಲಿ ಸಿನಿಮಾ ಶುರುವಾಗುತ್ತೆ. ಆ ಸಿನಿಮಾಗೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್.. ಹೀಗೆ ಸಾಲು ಸಾಲು ಹಿಟ್ ಚಿತ್ರಗಳ ಕಥೆಗಾಗಿ ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ ಇರುತ್ತೆ. ಡೈರೆಕ್ಷನ್ ಮಾತ್ರ ಆರ್. ಚಂದ್ರು ಅವರದ್ದು. ಇದಾಗ ಮೇಲೆ 50ನೇ ಚಿತ್ರದ ಪ್ಲ್ಯಾನ್ ರೆಡಿಯಾಗಲಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಪ್ಪಟ ಸುದೀಪ್ ಫ್ಯಾನ್. ಸುದೀಪ್ ಅವರಿಗಾಗಿ ಒಂದು ಸಿನಿಮಾ ಮಾಡೋ ಕನಸು ಇಟ್ಟುಕೊಂಡಿರೋ ರಿಷಬ್, ಕಿಚ್ಚ ಸುದೀಪ್ ಅವರ 50ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಾರಾ?

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more