Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

Published : Nov 24, 2021, 01:57 PM IST

200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ ಎಂದರು ಗಣೇಶ್. 
 

ನಿರ್ದೇಶಕ ಸಿಂಪಲ್​ ಸುನಿ (Simple Suni) ಮತ್ತು  ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಅಭಿನಯದ 'ಸಖತ್' (Sakath) ಸಿನಿಮಾ ಇದೇ ತಿಂಗಳ ನವೆಂಬರ್ 26ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್‌ ಸುನಿ, 'ಇದು ಎರಡೂವರೆ ಗಂಟೆ ನಗಿಸುವ ಸಿನಿಮಾ. ಪುಟಾಣಿ ಮಗುವಿನಿಂದ ಹಿಡಿದು ಅಜ್ಜ, ಅಜ್ಜಿಯವರೆಗೆ ಎಲ್ಲರೂ ನೋಡಬಹುದಾದ ಸಿನಿಮಾ' ಎಂದರು. ನಿರ್ಮಾಪಕರಾದ ನಿಶಾ ವೆಂಕಟ್‌ ಕೋಣಂಕಿ ಮತ್ತು ವೆಂಕಟ್‌ ನಾರಾಯಣ್‌ ದಂಪತಿ ತಮ್ಮ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಬಿಡುಗಡೆ ಖುಷಿಯನ್ನು ಹಂಚಿಕೊಂಡರು.

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ಗಣೇಶ್‌, '200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ' ಎಂದರು. ನಿರ್ಮಾಪಕ ಸುಪ್ರೀತ್‌, ನಾಯಕ ನಟಿಯರಾದ ನಿಶ್ವಿಕಾ ನಾಯ್ಡು, ಸುರಭಿ ಪುರಾಣಿಕ್‌ ಸಂತೋಷವಾಗಿದ್ದರು. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದ್ದು, ವಿಶೇಷವಾಗಿ ಗಣೇಶ್ ಪುತ್ರ ವಿಹಾನ್ (Vihan) ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more