Ek Love Ya: ಸಿಗರೇಟ್ ಸೀನ್‌ಗೆ ಸಂಬಂಧಪಟ್ಟಂತೆ ನೇರವಾಗಿ ಉತ್ತರಿಸಿದ ರಚಿತಾ ರಾಮ್

Ek Love Ya: ಸಿಗರೇಟ್ ಸೀನ್‌ಗೆ ಸಂಬಂಧಪಟ್ಟಂತೆ ನೇರವಾಗಿ ಉತ್ತರಿಸಿದ ರಚಿತಾ ರಾಮ್

Published : Dec 28, 2021, 02:07 PM IST

ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಸಿಗರೇಟು ಸೇದುವುದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರುವುದಿಲ್ಲ. ಸಹಜವಾಗಿ ಮೂಡಿಬಂದರೆ ಆ ಪಾತ್ರಕ್ಕೆ ಒಂದು ಕಳೆ ಎಂದು ಡಿಂಪಲ್ ಕ್ವೀನ್ ರಚಿತಾ ರಾಮ್​ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನ  ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್​ (Rachita Ram) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ಜೋಗಿ ಪ್ರೇಮ್ (Jogi Prem) ನಿರ್ದೇಶನದ 'ಏಕ್ ಲವ್ ಯಾ' (Ek Love Ya) ಚಿತ್ರವು ಒಂದು. ಈಗಾಗಲೇ ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ಅರ್ಜುನ್​ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್​ ಸಿಗರೇಟ್​ ಸೇದುವ ಹಾಗೂ ಎಣ್ಣೆ ಹೊಡೆಯುವ ದೃಶ್ಯವಿದ್ದೂ ಕೊಂಚ ಬೋಲ್ಡ್​ ಆಗಿಯೇ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ರಚಿತಾ ರಾಮ್​ ನೇರವಾಗಿ ಉತ್ತರಿಸಿದ್ದಾರೆ.

Ek Love Ya Song: ಗಂಡ್ ಹೈಕ್ಳ ಎದೆಯಲ್ಲಿ ರಚ್ಚು , ಮೀಟ್ ಆ್ಯಂಡ್ ಡೇಟ್‌ರೆ ರೆಡಿ!

ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಬೋಲ್ಡ್​ ದೃಶ್ಯಗಳಲ್ಲಿ ಯಾಕೆ ನಟಿಸಿದ್ದೇನೆ ಎಂಬುದು ಸಿನಿಮಾ ರಿಲೀಸ್​ ಆದಾಗ ಗೊತ್ತಾಗುತ್ತದೆ. ಹಾಗೂ ಸಿಗರೇಟು ಸೇದುವುದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರುವುದಿಲ್ಲ. ಸಹಜವಾಗಿ ಮೂಡಿಬಂದರೆ ಆ ಪಾತ್ರಕ್ಕೆ ಒಂದು ಕಳೆ. ದೃಶ್ಯಗಳಲ್ಲಿ ನೋಡಿದಾಗ ನಾನು ಇಷ್ಟು ಚೆನ್ನಾಗಿ ಸಿಗರೇಟು ಸೇದಿದ್ದೀನಾ ಅಂತ ಅನಿಸುತ್ತೆ ಎಂದು ರಚಿತಾ ರಾಮ್ ಹೇಳಿದ್ದಾರೆ. ಇನ್ನು 'ಏಕ್ ಲವ್ ಯಾ' ಚಿತ್ರವು ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದು, ರಾಣಾ (Raanna) ಹಾಗೂ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more