Bhajarangi 2: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವರಾಜ್ ಕುಮಾರ್

Bhajarangi 2: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವರಾಜ್ ಕುಮಾರ್

Suvarna News   | Asianet News
Published : Nov 14, 2021, 05:49 PM IST

ಸ್ಯಾಂಡಲ್​ವುಡ್‌ನ ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭಜರಂಗಿ 2 ಚಿತ್ರ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಇಂದು ಶಿವರಾಜ್​ಕುಮಾರ್ ಅಭಿಮಾನಿಗಳೊಂದಿಗೆ ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಭಜರಂಗಿ 2 ಸಿನಿಮಾ ವೀಕ್ಷಿಸಿದ್ದಾರೆ. 

ಸ್ಯಾಂಡಲ್​ವುಡ್‌ನ ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ 'ಭಜರಂಗಿ 2' (Bhajarangi 2) ಚಿತ್ರ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ರಿಲೀಸ್​ ಆದ ದಿನವೇ ಪುನೀತ್ ರಾಜ್​ಕುಮಾರ್ ( Puneeth Rajkumar) ನಿಧನದ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತಿಗೊಳಿಸಿತ್ತು. ಹಾಗೂ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಪ್ರೇಕ್ಷಕರು ಹೊರಬಂದಿದ್ದರು. ಹೀಗಾಗಿ ಅಭಿಮಾನಿಗಳ ಜತೆ ಸಿನಿಮಾ ನೋಡೋಕೆ ಶಿವಣ್ಣನಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಇಂದು ಶಿವರಾಜ್​ಕುಮಾರ್ ಅಭಿಮಾನಿಗಳೊಂದಿಗೆ (Fans) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. 

ಬೆಚ್ಚಿ ಬೀಳಿಸೋ Bhajarangi 2 ವಿಲನ್ ಮೇಕಿಂಗ್ ವಿಡಿಯೋ!

ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಶಿವಣ್ಣನಿಗೆ ನಿರ್ದೇಶಕ ಎ.ಹರ್ಷ ಹಾಗೂ ಖಳನಾಯಕ ಚೆಲುವರಾಜು ಸಾಥ್ ನೀಡಿದ್ದಾರೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳಿದ್ದು,ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ, ಸೌರವ್ ಲೋಕೇಶ್, ಹಿರಿಯ ನಟಿ ಶ್ರುತಿ, ಚೆಲುವ ರಾಜು, ಶಿವರಾಜ್ ಕೆ.ಆರ್.ಪೇಟೆ, ಕುರಿ ಪ್ರತಾಪ್ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಅದ್ದೂರಿ ಮೇಕಿಂಗ್‌ ಜೊತೆಗೆ ಶಿವಣ್ಣನ ಲುಕ್‌ಗಳು ಭಿನ್ನವಾಗಿವೆ. ದೀಪು ಎಸ್‌. ಕುಮಾರ್‌ ಸಂಕಲನ, ಸ್ವಾಮಿ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more