ಕನ್ನಡ ರಾಜ್ಯೋತ್ಸವಕ್ಕೂ ಅನೌನ್ಸ್ ಆಗಿಲ್ಲ ಯಶ್-19: ಯಶ್‌ ಅಭಿಮಾನಿಗಳು ಬಯಸುತ್ತಿರೋದೇ ಬೇರೆ..!

ಕನ್ನಡ ರಾಜ್ಯೋತ್ಸವಕ್ಕೂ ಅನೌನ್ಸ್ ಆಗಿಲ್ಲ ಯಶ್-19: ಯಶ್‌ ಅಭಿಮಾನಿಗಳು ಬಯಸುತ್ತಿರೋದೇ ಬೇರೆ..!

Published : Nov 02, 2023, 12:17 PM IST

ರಾಕಿಂಗ್ ಸ್ಟಾರ್ ಫ್ಯಾನ್ಸ್ ಆಸೆ ಇಂದೂ ಕೂಡ ಈಡೇರಿಲ್ಲ. ಈ ಕನ್ನಡದ ರಾಜ್ಯೋತ್ಸವಕ್ಕೆ ಯಶ್ 19 ಸಿನಿಮಾ ಅನೌನ್ಸ್ ಆಗುತ್ತೆ ಅಂತ ಕಾದಿದ್ದೆ ಬಂದು. ಆದ್ರೆ ಅದು ಆಗೇ ಇಲ್ಲ. ಆದ್ರೆ ಈ ಕನ್ನಡ ರಾಜ್ಯೋತ್ಸವ ದಿನದಲ್ಲಿ ಯಶ್ ಫ್ಯಾನ್ಸ್ ಬಯಸುತ್ತಿರೋದೇ ಬೇರೆ ಅನ್ನೋ ಗುಟ್ಟು ಮಾತ್ರ ಈಗ ರಟ್ಟಾಗಿದೆ.
 

ರಾಕಿಂಗ್ ಸ್ಟಾರ್ ಯಶ್. ಯಾವ್ ಪಾತ್ರಕ್ಕೂ ಸೂಟ್ ಆಗಬಲ್ಲ ಸೂಪರ್ ಸ್ಟಾರ್. ಇದಕ್ಕೆ ಸಾಕ್ಷಿ ಯಶ್(Yash) ಹಲವು ಕ್ಯಾರೆಕ್ಟರ್ ಫೋಟೋಗಳು ಈ ಹಿಂದೆ ವೈರಲ್ ಆಗಿದ್ವು. ಯಶ್ ಮಹಾಭಾರತ ಕರ್ಣನ(Karna) ಸಿನಿಮಾ ಮಾಡಿದ್ರೆ  ಚೆನ್ನಾಗಿರುತ್ತೆ ಅಂತ ಕರ್ಣನ ಲುಕ್ ಡಿಸೈನ್ ಮಾಡಿದ್ರು ಫ್ಯಾನ್ಸ್(Fans). ಅಷ್ಟೇ ಅಲ್ಲ ಯಶ್ ಈಗ ಟ್ರೆಂಡ್ ಆಗ್ತಿರೋದು ರಾಮಾಯಣ ಕಥೆಯ ರಾವಣ(Ravana) ಪಾತ್ರಕ್ಕೆ. ಹಿಂದಿಯಲ್ಲಿ ಬರೋ ರಾಮಾಯಣ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಅನ್ನೋ ಬಗ್ಗೆ ಹಲವು ದಿನಗಳಿಂದ ಸುದ್ದಿ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ರಾವಣನ ಯಶ್ ಲುಕ್ ಕೂಡ ವೈರಲ್ ಆಗದೆ.

ಇದರ ಜೊತೆಗೆ ಹಾಲಿವುಡ್ ನ  ವಾರಿಯ ಅವತಾರ ಹಾಗು ಮೊನ್ನೆಯಷ್ಟೆ ಯಶ್ 19 ಫಸ್ಟ್ ಲುಕ್ ಇದೆ ಅಂತ ಅಂಡರ್ ವರ್ಲ್ಡ್ ಡಾನ್ ಅವತಾರದ ಫೋಟೋ ಕೂಡ ಹೊರ ಬಂದಿದೆ. ಇದರ ಮಧ್ಯೆ ಯಶ್ ಫ್ಯಾನ್ಸ್ ಈಗ ಹೊಸ ಆಸೆಯೊಂದನ್ನ ಚಿಗುರೊಡೆಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇಮ್ಮಡಿ‌ ಪುಲಿಕೇಶಿ ಆದ್ರೆ‌  ಹೆಂಗಿರುತ್ತೆ..? ಈ ದೊಡ್ಡ ಆಸೆ ಯಶ್ ಫ್ಯಾನ್ಸ್ ಮನದಲ್ಲಿ ಹುಟ್ಟಿದೆ. ಇದಕ್ಕೆ ಸಾಕ್ಷಿ ಈ ಕನ್ನಡ ರಾಜ್ಯೊತ್ಸವದಲ್ಲಿ ಯಶ್ ರ ಬೆಳಗಾವಿ ಫ್ಯಾನ್ಸ್ ಇಮ್ಮಡಿ ಪುಲಿಕೇಶಿ ಯಶ್ 19 ಅನ್ನೋ ಫೋಟೋ ಹಿಡಿದು ಸಂಭ್ರಮಿಸಿದ್ದಾರೆ. ಅಂದ್ರೆ ಇದರ ಅರ್ಥ ಯಶ್ 19ನೇ ಸಿನಿಮಾ ಇಮ್ಮಡಿ‌ ಪುಲಿಕೇಶಿ ಕಥೆಯೇ ಆಗಿರಲಿ ಅನ್ನೋ ಅಭಿಮಾನಿಗಳ ಆಸೆ.

ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳು ಇಮ್ಮಡಿ ಪುಲಿಕೇಶಿ ಜೀವನ ಚರಿತ್ರೆಯಲ್ಲಿದೆ. ಯಶ್ ಆ ಪಾತ್ರದಲ್ಲಿ ನಟಿಸಿದ್ರೆ ಫ್ಯಾನ್ಸ್ಗೆ  ಹಬ್ಬವೇ ಸರಿ. ಆದ್ರೆ ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ಯಶ್ ಬಳಗದಲ್ಲಿ ಆಗಿಲ್ಲ. ಆದ್ರೆ. ಇದು ಕೇವಲ ಅಭಿಮಾನಿಗಳ ಆಸೆ ಅಷ್ಟೇ. ಹೀಗಾಗಿ ಯಶ್ ಗತ್ತು ಗೈರತ್ತಿಗೆ ಹೇಳಿ ಮಾಡಿಸಿದ ಪಾತ್ರ ಇಮ್ಮಡಿ ಪುಲಿಕೇಶಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ಯಶ್ ಯೋಜನೆ ಮತ್ತು ಯೋಚನೆಯೇ ಬೇರೆಯದ್ದಿದೆ. 

ಇದನ್ನೂ ವೀಕ್ಷಿಸಿ:  'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಾಂಗ್ ರಿಲೀಸ್: ತಂಗಾಳಿಯ ಆಲಾಪದಲ್ಲಿ ಪ್ರಿಯಾ-ಮನು ರೊಮ್ಯಾನ್ಸ್!

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?