Shriram Bhat | Updated: Mar 20, 2025, 5:20 PM IST
ಕಿಸ್ ಕಿಸ್ ಕಿಸ್ಸಿಕ್ ಪ್ರಚಾರಕ್ಕೆ ಬಂದ ಗಣೇಶ್ ಆಚಾರ್ಯ!
ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಗಣೇಶ್ ಆಚಾರ್ಯ ನಿರ್ಮಾಣದಲ್ಲಿ ಕಿಸ್ ಕಿಸ್ ಕಿಸ್ಸಿಕ್ ಅನ್ನೋ ಸಿನಿಮಾ ಬರುತ್ತಿದ್ದು, ಮಾರ್ಚ್ 21ಕ್ಕೆ ಚಿತ್ರ ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ . ಶಿವ ಹರೇ ನಿರ್ದೇಶನದ ಕಿಸ್ ಕಿಸ್ ಕಿಸ್ಸಿಕ್ ಚಿತ್ರದ ಮೂಲಕ ಶುಶಾಂತ್, ಜಾನ್ಯಾ ಜೋಶಿ ಮತ್ತು ವಿಧಿ ಸೇರಿದಂತೆ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ.
ಮೆಜೆಸ್ಟಿಕ್-2 ಚಿತ್ರದ 'ನಾಯಕ ನಾನೇ' ಸಾಂಗ್ ರಿಲೀಸ್..!
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಮೆಜೆಸ್ಟಿಕ್-2 ಚಿತ್ರದ 'ನಾಯಕ ನಾನೇ' ಎಂಬ ಮೊದಲ ಹಾಡು ರಿಲೀಸ್ ಆಗಿದೆ. ಈ ಚಿತ್ರಕ್ಕೆ ರಾಮು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುವನಟ ಭರತ್ ಕುಮಾರ್, ಸಂಹಿತಾ ವಿನ್ಯಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಈ ಸಾಂಗ್ ರಿಲೀಸ್ ಮಾಡಿ, ಈ ಟೈಟಲ್ ಅದ್ಭುತವಾಗಿದೆ. ಇದರಿಂದ ಲಾಂಚ್ ಆದವರು ಎತ್ತರಕ್ಕೆ ಹೋಗಿದ್ದಾರೆ. ಅದೇರೀತಿ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಕೂಡ ಬೆಳೆಯಲಿ. ನಿರ್ಮಾಪಕರಿಗೆ ಒಳ್ಳೇ ಲಾಭ ಬರಲಿ ಅಂತ ಹಾರೈಸಿದ್ದಾರೆ. ಮೆಜೆಸ್ಟಿಕ್-2 ಸಿನಿಮಾದಲ್ಲಿ ಹಿರಿಯ ನಟಿಯರಾದ ಶೃತಿ, ಕನಸಿನ ರಾಣಿ ಮಾಲಾಶ್ರೀ ಕೂಡ ನಟಿಸಿದ್ದಾರೆ.
ಕಲ್ಕಿ ಅವತಾರದಲ್ಲಿ ಅರಿಂದಮ್.. ಲಿರಿಕಲ್ ಸಾಂಗ್ ರಿಲೀಸ್..!
ತನ್ನ ವಯಸ್ಸಿಗೆ ಮೀರಿದಂಥ ನಡವಳಿಕೆ, ಬುದ್ದಿಶಕ್ತಿ ಹೊಂದಿದ ಯುವಕನೋರ್ವನ ಜೀವನದಲ್ಲಿ ದುಷ್ಟಶಕ್ತಿಗಳ ವಿರುದ್ದ ನಡೆಯುವ ಹೋರಾಟ ಹಾಗೂ ಪ್ರೀತಿ, ಪ್ರೇಮದ ಸುತ್ತ ನಡೆಯುವ ಘಟನೆಗಳುಳ್ಳ ಸಿನಿಮಾ ಅರಿಂದಮ್. ಕಲ್ಕಿ ಅಗಸ್ತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅರಿಂದಮ್ ಚಿತ್ರದ ಎರಡು ಲಿರಿಕಲ್ ಹಾಡುಳು ರಿಲೀಸ್ ಆಗಿವೆ.. ಕಲ್ಕಿಅಗಸ್ತ್ಯ ಚಿತ್ರದಲ್ಲಿ ನಾಯಕನಾಗೂ ಕಾಣಿಸಿಕೊಂಡಿದ್ದು, . ನಾಯಕಿಯಾಗಿ ಶ್ವೇತಾ ಭಟ್ ನಟಿಸಿದ್ದಾರೆ. ಸಂತೋಷ್ ಜೋಶ್ವ ಸಂಗೀತ, ಕಯಾಜ್ ಅವರ ಛಾಯಾಗ್ರಹಣ, ಸುಬ್ಬು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
4 ಕಿರುಚಿತ್ರಗಳ ನಿರ್ಮಾಣ ಮಾಡಿದ ಶಾಂತನು ರಾವ್
ಉದಯೋನ್ಮುಖ ಚಿತ್ರ ನಿರ್ದೇಶಕ ಶಾಂತನು ರಾವ್, ವಿಭಿನ್ನ ಕಥೆಯ 4 ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಮಹಿಳಾ ಶಿಕ್ಷಣ, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಪ್ರಣಯ ಮತ್ತು ಆಕ್ಷನ್/ಥ್ರಿಲ್ಲರ್ ಸೇರಿದಂತೆ ವಿವಿಧ ಜಾನರ್ ಗಳ ಕಥೆಯನ್ಮ ಈ ಚಿತ್ರಗಳಲ್ಲಿ ಶಾಂತನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಈ ಮೂಲಕ ಶಾಂತನು ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ.