ಬಿಗ್‌ಬಾಸ್‌ ಮನೆಯಲ್ಲಿ ಹಾಡು-ಕುಣಿತ..ಡ್ರೋನ್-ವರ್ತೂರು ಸಖತ್‌ ಸ್ಟೆಪ್‌ !

ಬಿಗ್‌ಬಾಸ್‌ ಮನೆಯಲ್ಲಿ ಹಾಡು-ಕುಣಿತ..ಡ್ರೋನ್-ವರ್ತೂರು ಸಖತ್‌ ಸ್ಟೆಪ್‌ !

Published : Dec 26, 2023, 10:31 AM IST

ಬಿಗ್ ಬಾಸ್‌ನಲ್ಲಿ ಪ್ರತಿ ದಿನ ಒಂದೊಂದು ಟ್ವಿಸ್ಟ್ ಇದ್ದೇ ಇರುತ್ತೆ. ಅದರಂತೆ  ಈ ವೀಕೆಂಡ್‌ನಲ್ಲೂ ಅಂತದ್ದೇ ಟ್ವಿಸ್ಟ್ ಕಾದಿತ್ತು. ಭಾನುವಾರ ನಡೆದ ಎಲಿಮಿನೇಷನ್‌ನಲ್ಲಿ ಇಬ್ಬರು ಮನೆಯಿಂದ ಹೊರ ಹೋದಂತೆ ತೋರಿಸಲಾಗಿದೆ. ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ ಎನ್ನಲಾಗಿದೆ. 

ಇನ್ನು ನಾಮಿನೇಟ್ ಆದವರ ಪೈಕಿ ಸೇವ್ ಮಾಡಲು ಬಿಗ್ ಬಾಸ್(Bigg Boss) ವಿವಿಧ ರೀತಿಯ ಚಟುವಟಿಕೆ ನೀಡುತ್ತಾ ಹೋದರು. ಈ ವೇಳೆ ಕೊನೆಯಲ್ಲಿ ಉಳಿದುಕೊಂಡಿದ್ದು ಮೈಕಲ್ ಹಾಗೂ ಅವಿನಾಶ್ ಮಾತ್ರ. ಅವಿನಾಶ್ ಹಾಗೂ ಮೈಕಲ್‌ನ ಗಾರ್ಡನ್ ಏರಿಯಾಗೆ ಬಂದ ಕಾರಿನಲ್ಲಿ ಕೂರಿಸಲಾಯಿತು. ಆ ಬಳಿಕ ಎರಡೂ ಕಾರುಗಳು ಹೊರ ಹೋದವು. ಇಲ್ಲಿಗೆ ಎಪಿಸೋಡ್ ಪೂರ್ಣಗೊಂಡಿದೆ. ಎಪಿಸೋಡ್‌ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಈ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದೆ ಬಿಗ್ ಬಾಸ್. ಕಳೆದ ವೀಕೆಂಡ್‌ನಲ್ಲಿ(Weekend) ಕೆಸಿಸಿ ಕ್ರಿಕೆಟ್ ಕಾರಣ ಸುದೀಪ್ ಅವರು ಬಂದಿರಲಿಲ್ಲ. ಹೀಗಾಗಿ ಶನಿವಾರದ ಎಪಿಸೋಡ್‌ನ ಶ್ರುತಿ ಅವರು ನಡೆಸಿಕೊಟ್ಟಿದ್ದರು. ಭಾನುವಾರದ ಎಪಿಸೋಡ್‌ಗೆ ಅತಿಥಿಗಳಾಗಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ(Shine Shetty) ಹಾಗೂ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ(Shubha Poonja) ಬಂದು ಸಖತ್ ಮನರಂಜನೆ ನೀಡಿದ್ದರು. ಮನೆಯ ಸ್ಪರ್ಧಿಗಳಿಂದ ಹಲವು ಟಾಸ್ಕ್‌ಗಳನ್ನು ಮಾಡಿಸಿದ್ದರು. ಮಾಡಿಸಿದ ಎಲ್ಲ ಟಾಸ್ಕ್‌ಗಳು ಮನೊರಂಜನಾತ್ಮಕವಾಗಿದ್ದವು. ವಾರವೆಲ್ಲ ಟಾಸ್ಕ್ ಆಡಿ, ಜಗಳ ಮಾಡಿ ಸುಸ್ತಾಗಿದ್ದ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದರು. ರಾಜಾ ನನ್ನ ರಾಜಾ ಹಾಡಿಗೆ  ಸಂಗೀತಾ ನಮ್ರತಾ ಸಖತ್ತಾಗಿ ಸ್ಟೆಪ್ ಹಾಕಿದ್ದರು. ಡ್ರೋನ್ ಪ್ರತಾಪ್ ಮತ್ತು ವರ್ತೂರು ಡ್ಯಾನ್ಸ್ ಕೂಡ ಮಜವಾಗಿತ್ತು.

ಇದನ್ನೂ ವೀಕ್ಷಿಸಿ:  ಬಾಬಿ ಡಿಯೋಲ್ 'ಜಮಾಲ್ ಕುಡು' ಹಾಡಿನ ಅರ್ಥ ಇದೇ ನೋಡಿ!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more