ಮಗನ ಹುಟ್ಟುಹಬ್ಬದಲ್ಲಿ ಮಗುವಾದ ಯಶ್: ಕಾಲಿಗೆ ಹಗ್ಗ ಕಟ್ಟಿಕೊಂಡು ಓಡಿದ ಅಪ್ಪ-ಮಗ!

ಮಗನ ಹುಟ್ಟುಹಬ್ಬದಲ್ಲಿ ಮಗುವಾದ ಯಶ್: ಕಾಲಿಗೆ ಹಗ್ಗ ಕಟ್ಟಿಕೊಂಡು ಓಡಿದ ಅಪ್ಪ-ಮಗ!

Published : Nov 03, 2024, 01:32 PM IST

ರಾಕಿಂಗ್ ಸ್ಟಾರ್ ಯಶ್​ ಸುಪುತ್ರ ಯಥರ್ವ್ ಮೂರು ದಿನದ ಹಿಂದಷ್ಟೆ ಐದೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಗನ ಹುಟ್ಟುಹಬ್ಬವನ್ನ ಯಶ್ ಸಖತ್​ ಆಗೆ ಸೆಲೆಬ್ರೇಟ್ ಮಾಡಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್​ ಪಕ್ಕಾ ಫ್ಯಾಮಿಲಿ ಮ್ಯಾನ್. ಹೆಂಡ್ತಿ ಮಕ್ಕಳು ಅಂತ ಬಂದ್ರೆ ಎಂಥಾ ಕೆಲಸ ಇದ್ರು ಅದನ್ನ ಬದಿಗಿಟ್ಟು ಮೊದಲು ಫ್ಯಾಮಿಲಿಗೆ ಟೈಮ್ ಕೊಡ್ತಾರೆ. ಮೊನ್ನೆಯಷ್ಟೆ ಯಶ್​ ತನ್ನ ಮುದ್ದಿನ ಮಗ ಯಥರ್ವ್​ ಹುಟ್ಟುಹಬ್ಬ ಮಾಡಿದ್ರು. ಫ್ಯಾಮಿಲಿ ಕ್ಲೋಸ್ ಫ್ರೆಂಡ್ಸ್​ ಜೊತೆ ಮಗ ಯಥರ್ವ್​​​​​​ ಬರ್ತ್​ಡೇ ಪಾರ್ಟಿ ಆಗಿತ್ತು. ಪಾರ್ಟಿಯಲ್ಲಿ ಯಶ್ ಮಕ್ಕಳ ಜೊತೆ ಸೇರಿ ಟಗರು ಸಿನಿಮಾದ ಹಾಡಿಗೆ ತನ್ನದೇ ಸ್ಟೈಲ್​​ನಲ್ಲಿ ಮಸ್ತ್ ಆಗಿ ಡಾನ್ಸ್ ಮಾಡಿದ್ರು. ಯಶ್​ ಸುಪುತ್ರ ಯಥರ್ವ್ ಮೂರು ದಿನದ ಹಿಂದಷ್ಟೆ ಐದೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಗನ ಬರ್ತ್ಡೇಯನ್ನ ಯಶ್ ಸಖತ್​ ಆಗೆ ಸೆಲೆಬ್ರೇಟ್ ಮಾಡಿದ್ದಾರೆ. 

ಟಾಕ್ಸಿಕ್​ ವರ್ಕ್​​ಗೆ ಬ್ರೇಕ್​ ಹಾಕಿರೋ ಯಶ್​ ಕಳೆದೊಂದು ವಾರದಿಂದ ಸಂಸಾರದ ಬಂಡಿಯಲ್ಲೇ ಕೂತಿದ್ದಾರೆ. ಇದೀಗ ಯಶ್ ಮನೆಯಲ್ಲಿ ಡಬಲ್ ಸೆಲೆಬ್ರೇಷನ್ ಆಗಿದೆ. ಒಂದು ಮಗನ ಹುಟ್ಟುಹಬ್ಬ ಆದ್ರೆ ಮತ್ತೊಂದು ದೀಪಾವಳಿ. ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ. ರಾಕಿಂಗ್ ಸ್ಟಾರ್ ಯಶ್ ಮಕ್ಕಳ ವಿಷದಲ್ಲೂ ಇದು ಸತ್ಯ. ಅಪ್ಪ ಅಮ್ಮನಿಗೆ ಮಕ್ಕಳೇ ಪ್ರಪಂಚ. ಮಕ್ಕಳಿಗೆ ಅಪ್ಪ ಅಮ್ಮನೇ ಜಗತ್ತು. ಹೀಗಾಗೆ ಮಗ ಯಥರ್ವ್ ಹುಟ್ಟುಹಬ್ಬದಲ್ಲಿ ಯಶ್​ ಮಗುವಾಗಿದ್ದು. ಮಕ್ಕಳ ಜೊತೆ ಡಾನ್ಸ್ ಮಾಡಿದ್ದು. ಈಗ ದೀಪಾವಳಿ ಹಬ್ಬದಲ್ಲೂ ಮಕ್ಕಳ ಜೊತೆ ಯಶ್​ ಮಿಂಚಿದ್ದಾರೆ. ಯಶ್ ಪುತ್ರ ಯಥರ್ವ್​ ಹುಟ್ಟುಹಬ್ಬ ಮುಗಿದಿದ್ರೂ ಮಗನ ಬರ್ತ್​ಡೇ ಸೆಲೆಬ್ರೇಷ್ ಮಾತ್ರ ಕಮ್ಮಿ ಆಗಿಲ್ಲ. 

ಹುಟ್ಟುಹಬ್ಬದ ವಿಶೇಷವಾಗಿ ಯಶ್ ತನ್ನ ಇಬ್ಬರು ಮಕ್ಕಳನ್ನ ಫನ್ನಿ ಗೇಮ್​​​ ಪ್ಲೇಗೆ ಕರೆದುಕೊಂಡು ಹೋಗಿದ್ದಾರೆ. ಅಪ್ಪ ಯಶ್ ಮಗ ಯಥರ್ವ್​ ಕಾಲಿಗೆ ಹಗ್ಗ ಕಟ್ಟಿಕೊಂಡು ಓಡೋ ಫನ್ನಿ ಆಟ ಆಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್ ಚೆಲ್ ಎಬ್ಬಿಸಿದೆ. ಇನ್ನು ಯಶ್ ಮನೆ ದೀಪಾವಳಿ ಸೆಲೆಬ್ರೇಷನ್.. ಹಬ್ಬ ಅಂತ ಬಂದ್ರೆ ಯಶ್ ರಾಧಿಕಾ ಯಾವ ಫೆಸ್ಟಿವೆಲ್​ಅನ್ನೂ ಬಿಡೋಲ್ಲ. ಎಂಥಾದ್ದೇ ಕೆಲಸ ಇದ್ರು ಮಕ್ಕಳಿಗೋಸ್ಕರ ಇಡೀ ಫ್ಯಾಮಿಲಿ ಸೇರಿ ಹಬ್ಬ ಮಾಡ್ತಾರೆ. ಈ ಭಾರಿ ದೀಪಾವಳಿ ಕೂಡ ಯಶ್ ಮನೆ ಮಂದಿ ಸೇರಿಕೊಂಡು ಆಚರಿಸಿದ್ದಾರೆ. ಮಕ್ಕಳ ಜೊತೆ ಸೇರಿ ಮನೆ ಅಂಗಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮಗನ ಬರ್ತ್ಡೇ ದೀಪಾವಳಿ ಒಟ್ಟೊಟ್ಟಿಗೆ ಬಂದಿರೋದು ಯಶ್ ಮನೆ ತುಂಬಾ ಸಂಭ್ರಮವೇ ತುಂಬಿದೆ. 

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more