ಆ್ಯಕ್ಷನ್ ಪ್ರಿನ್ಸ್ ಧ್ರುವನ 'ಕೆಡಿ' ಆ್ಯಕ್ಷನ್ ಶುರು..! ಹೊಸ ಅಪ್‌ಡೇಟ್ ಕೊಟ್ರು ಜೋಗಿ ಪ್ರೇಮ್..!

ಆ್ಯಕ್ಷನ್ ಪ್ರಿನ್ಸ್ ಧ್ರುವನ 'ಕೆಡಿ' ಆ್ಯಕ್ಷನ್ ಶುರು..! ಹೊಸ ಅಪ್‌ಡೇಟ್ ಕೊಟ್ರು ಜೋಗಿ ಪ್ರೇಮ್..!

Published : Dec 21, 2023, 10:24 AM IST

ಸ್ಯಾಂಡಲ್‌ವುಡ್‌ ದುನಿಯಾದಲ್ಲಿ ಸಖತ್ ಕ್ರೇಜ್ ಬಿಲ್ಡ್ ಮಾಡಿರೋ ಟೈಟಲ್ ‘ಕೆಡಿ’. ಸೆಟ್ಟೇರಿದ ದಿನದಿಂದ್ಲೂ ಭರ್ಜರಿ ಸೌಂಡ್ ಮಾಡ್ತಿದೆ ಈ ಸಿನಿಮಾ. ಅಮೇಜಿಂಗ್ ಸೆಟ್‌ನಲ್ಲಿ ಕೆಡಿ ರೆಡಿಯಾಗ್ತಿದ್ದು, ಇದೀಗ ಈ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ರಿವೀಲ್ ಆಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಕೆಡಿ'ಯ ಆ್ಯಕ್ಷನ್ ಶುರು ಮಾಡಿದ್ದಾರೆ.

 
ಭಯಾನಕ ದೃಶ್ಯ, ಬೆಂಕಿ ಜ್ವಾಲೆಯ ಉರಿ, ರಕ್ತಾಭಿಷೇಕದೊಂದಿಗೆ ಕಾಲಿಯ ಎಂಟ್ರಿ, ಅವನ ಸ್ವಾಗತಕ್ಕಾಗಿ ಸೇರಿರೊ ಜನಸಾಗರ. ಯುದ್ಧ ಭೂಮಿಯಲ್ಲಿ ಕೆಡಿಯ(KD Movie) ಅಟ್ಟಹಾಸ ಜೊರಾಗಿದೆ ರಕ್ತದ ಓಕುಳಿ ಶುರುವಾಗಿದೆ. ಇದನ್ನೆಲ್ಲಾ ಕೆಡಿ ದ ಡೆವಿಲ್ ಟೀಸರ್ನಲ್ಲಿ ನೋಡಿದ್ವಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾನ(Dhruva Sarja) ಕಾಲಿ ಅವತಾರಕ್ಕೆ ಫ್ಯಾನ್ಸ್ ನಿಬ್ಬೆರಗಾಗಿದ್ದಾರೆ. ಈ ರೌದ್ರವತಾರ ನೋಡಿ ಸಿನಿಮಾದ ಮೇಲಿನ ಎಕ್ಸ್ಪೆಕ್ಟೇಷನ್ ಹೈ ಆಗಿದೆ. ಹೀಗಾಗಿ ಕೆಡಿಯ ಪ್ರತಿ ದೃಶ್ಯದಲ್ಲೂ ಅದ್ಧೂರಿತನ ತುಂಬೋಕ್ಕೆ ಡೈರೆಕ್ಟರ್ ಪ್ರೇಮ್(Prem) ಪ್ಲಾನ್ ಮಾಡಿದ್ದಾರೆ. ಅದರಂತೆ ಈಗಾಗ್ಲೆ ಶೇಕಡ 60ರಷ್ಟು ಶೂಟಿಂಗ್ ಮುಗಿಸಿರೋ ಪ್ರೇಮ್ ಈಗ ಕೆಡಿ ಅಡ್ಡಕ್ಕೆ ಭಾರತೀಯ ಚಿತ್ರರಂಗದ ಹೆಸರಾಂತ ಸ್ಟಂಟ್ ಮಾಸ್ಟರ್ ರಾಮ್ ಲಕ್ಷ್ಮಣ್ರನ್ನ ಕರೆಸಿಕೊಂಡಿದ್ದಾರೆ. KD 1970ರ ದಶಕದ ಸಿನಿಮಾ ಈ ಸಿನಿಮಾ ಪುರ್ಥಿ ರೆಟ್ರೋ ಸ್ಟೈಲ್ನಲ್ಲೇ ಇರುತ್ತೆ. ಈ ಕೆಡಿಯಲ್ಲಿ ಕ್ರೈಮ್ ಹೆಚ್ಚಾಗಿರುತ್ತೆ. ಹೀಗಾಗಿ ಭರ್ಜರಿ ಆ್ಯಕ್ಷನ್ಗಳು ಕೆಡಿ ಹೈಲೆಟ್. ಅದ್ಮೇಲೆ ಈ ಸಿನಿಮಾದ ಅದ್ಧೂರಿಯಾಗಿ ಆಕ್ಷನ್ಗಳನ್ನ ಕಂಪೋಸ್ ಮಾಡೋ ಆಕ್ಷನ್ ಡೈರೆಕ್ಟರೇ ಇರಬೇಕು ಅಲ್ವಾ. ಅದಕ್ಕಾಗಿ ನಿರ್ದೇಶಕ ಜೋಡಿ ಪ್ರೇಮ್ ರಾಮ್ ಲಕ್ಷ್ಮಣ್ರನ್ನ ಕೆಡಿ ಅಡ್ಡಾಕೆ ಕರೆಸಿದ್ದು, ಡೆಡ್ಲಿ ಡುಡ್ಸ್ ಇನ್ ಕೆಡಿ ಆ್ಯಕ್ಷನ್ ವಾರ್‌ಫೀಲ್ಡ್‌ಅಂತ ಜೋಗಿ ಪ್ರೇಮ್ ಹೇಳಿಕೊಂಡಿದ್ದಾರೆ. ಕೆಡಿ ಹೆಸರಲ್ಲೇ ಇರು ಆಕ್ಷನ್ ಸಿನಿಮಾ ಅನ್ನೋದನ್ನ ಹೇಳುತ್ತೆ. ಈ ಸಿನಿಮಾದಲ್ಲಿ ವಿಲನ್ ಕೆಜಿಎಫ್ನ ಅಧಿರ ಸಂಜಯ್ ದತ್. ಹಾಗಿದ್ಮೇಲೆ ಕೆಡಿಯ ಖದರ್ ಹೇಗಿರುತ್ತೆ ಅಂತ ನೀವೇ ಊಹಿಸಿಕೊಳ್ಳಿ. ಕೆಡಿಯಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ಗಳಿದ್ದು ನಟ ಸಂಜಯ್ ದತ್ ಹಾಗು ಧ್ರುವ ಸರ್ಜಾರ ಆಕ್ಷನ್ ದೃಶ್ಯಗಳ ಚಿತ್ರೀಕರಣವನ್ ಫೈಟ್ ಮಾಸ್ಟರ್ ರಾಮ್ ಲಕ್ಷ್ಮಣ್ ನಿಭಾಯಿಸಲಿದ್ದಾರೆ ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಕೆಡಿ ಟೀಂ ಮಾಹಿತಿ ಕೊಟ್ಟಿದೆ.

ಇದನ್ನೂ ವೀಕ್ಷಿಸಿ:  2025ಕ್ಕೆ ಬಂದೇ ಬಿಡುತ್ತಾ ಕೆಜಿಎಫ್-3..! ರಾಕಿ ಭಾಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್..!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more