Radhika Pandit: ಸ್ಯಾಂಡಲ್​ವುಡ್​ 'ಸಿಂಡ್ರೇಲಾ'ಗೆ ಹುಟ್ಟುಹಬ್ಬದ ಸಂಭ್ರಮ

Radhika Pandit: ಸ್ಯಾಂಡಲ್​ವುಡ್​ 'ಸಿಂಡ್ರೇಲಾ'ಗೆ ಹುಟ್ಟುಹಬ್ಬದ ಸಂಭ್ರಮ

Suvarna News   | Asianet News
Published : Mar 09, 2022, 02:52 PM IST

ಸ್ಯಾಂಡಲ್​ವುಡ್​​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್​ ಸೋಮವಾರದಂದು 38ನೇ ಜನ್ಮದಿನವನ್ನು ಆಚರಿಸಿದ್ದರು. ಪತಿ ಯಶ್​ ಮತ್ತು ಮಕ್ಕಳು, ಆಪ್ತರೊಂದಿಗೆ ಈ ಸಂಭ್ರಮ ಆಚರಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ (Radhika Pandit) ಮಾರ್ಚ್ 7ರಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡರು. ಪತಿ ರಾಕಿಂಗ್ ಸ್ಟಾರ್ ಯಶ್ (Yash), ಮಕ್ಕಳಾದ ಆಯ್ರಾ (Ayra), ಯಥರ್ವ (Yatharv) ಇನ್ನುಳಿದ ಕುಟುಂಬಸ್ಥರು ಸೇರಿದಂತೆ ಸ್ನೇಹಿತರು ಇದ್ದರು. ಮಕ್ಕಳಾದ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿರುವ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿ ಇದ್ದಾರೆ. ಈ ಬಾರಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಗಲಿಕೆ ಹಿನ್ನಲೆ ಅವರು ಸರಳವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. 

ವಿಮಾನದಲ್ಲಿ ಸಂಚರಿಸುವಾಗ ಯಶ್ ಮಕ್ಕಳು ಮಾಡೋ ಕೆಲಸವೇನು?

'ಮೊಗ್ಗಿನ ಮನಸ್ಸು' (Moggina Manasu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ ಅದೇ ಚಿತ್ರದಲ್ಲಿ ತಮಗೆ ನಾಯಕರಾಗಿದ್ದ ಯಶ್​ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಯಶ್ ಅವರು ತಮ್ಮ ಮುದ್ದಿನ ಮಡದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ಮಗುವಾದ ಮೇಲೂ ಚಾರ್ಮ್​ ಉಳಿಸಿಕೊಂಡಿರುವ ರಾಧಿಕಾ ಪಂಡಿತ್​ ಮತ್ತೆ ನಟನೆಗೆ ಮರಳಬೇಕು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಮಾತ್ರ ಇನ್ನು ನಿರ್ಧಾರ ಪ್ರಕಟಿಸಿಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more