ಮನದನ್ನೆಯನ್ನ ಕರೆ ತರಲು ಹೆಲಿಕಾಪ್ಟರ್ ಕಳುಹಿಸಿದ ಅನ್ನದಾತ

Jun 12, 2019, 5:13 PM IST

ಸೊಲ್ಲಾಪುರ, ಮಹಾರಾಷ್ಟ್ರ; ಸಾಮಾನ್ಯವಾಗಿ ಮದುಮಗಳನ್ನ ಮದುವೆ ಮಂಟಪಕ್ಕೆ ವಧುವಿನ ಸೋದರ ಮಾವ ಕೈಹಿಡಿದುಕೊಂಡೋ, ಕೆಲವೊಂದು ಸಂಪ್ರದಾಯದಲ್ಲಿ ಪಲ್ಲಕ್ಕಿಯಲ್ಲೋ, ಹೆಗಲಲ್ಲಿ ಹೊತ್ತುಕೊಂಡೋ ಬರೋದು ಸಂಪ್ರದಾಯ. ಆದ್ರೆ ಇಲ್ಲೊಬ್ಬ ವರ ಅದು ಕೂಡ ರೈತ, ತಾನು ಮದುವೆಯಾಗೋ ಹುಡುಗಿಯನ್ನ ಹೆಲಿಕಾಪ್ಟರ್‌ನಲ್ಲಿ ಮದುವೆ ಮಂಟಪಕ್ಕೆ ಕರೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಅಂದ್ಹಾಗೆ ಈ ರೀತಿಯ ಅಪರೂಪದ ಘಟನೆ ನಡೆದಿರೋದು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಪವಿತ್ರ ಯಾತ್ರಾ ಸ್ಥಳ ಪಂಡರಾಪುರದಲ್ಲಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಅಪರೂಪದ ಘಟನೆ ನಡೆದಿದೆ. ಎಂಬಿಎ ಪದವೀಧರನಾಗಿರೋ ನಿತಿನ್ ಎಂಬ ವರ ಪಟ್ಟಣದಲ್ಲಿ ಕೆಲಸ ಮಾಡುವ ಬದಲು ಕೃಷಿಯೇ ಶ್ರೇಷ್ಠ ಎಂದು ತನ್ನ ಊರಿಗೆ ಹೋಗಿ ರೈತ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕೃಷಿಯಲ್ಲಿ ಉತ್ತಮ ಆದಾಯ ಗಳಿಸಿದ್ರು. ನಿತಿನ್ ಮದುವೆ ಪಂಡರಾಪುರದ ಉಪ್ಲಾಸಿ ಎಂಬ ಗ್ರಾಮದ ಐಶ್ವರ್ಯ ವಿದ್ಯಾವಂತ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ತನ್ನನ್ನು ಮದುವೆಯಾಗುವ ಹುಡುಗಿಯನ್ನ ಮಂಟಪಕ್ಕೆ ಕರೆತರಲು ರೈತನಾದ ವರ ಹೆಲಿಕಾಪ್ಟರ್ ಕಳಿಸುವ ಮೂಲಕ ದೇಶದ ಜನರ ಗಮನಸೆಳೆದಿದ್ದಾನೆ. ಇನ್ನು ಮದುಮಗಳು ಆಕಾಶದಿಂದ ಧರೆಗಿಳಿದು ಬರೋದನ್ನ ನೋಡೋಕೆ ಇಡೀ ಊರಿಗೆ ಊರೇ ಮೂಗ ಮೇಲೆ ಬೆರಳಿಟ್ಟುಕೊಂಡಿದ್ದೆ ಅಲ್ಲದೇ ಈ ಕಾರ್ಯದಿಂದ ನಿತಿನ್ ಎಲ್ಲರ ಮೆಚ್ಚುಗೆ ಪಾತ್ರ ನಾಗಿದ್ದಾನೆ.