Aug 20, 2023, 2:27 PM IST
ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೆ, ಅದು ಭಯದಿಂದಲ್ಲ, ಬೇಟೆಗಾಗಿ ಹುಲಿ ಹೊಂಚು ಹಾಕಿದೆ ಅಂತಾನೇ ಅರ್ಥ. ರಾಜ್ಯ ರಾಜಕಾರಣದಲ್ಲೂ ಬೇಟೆಗೆ ಫೇಮಸ್ ಆಗಿರೋ ಒಂದು ಹುಲಿ ಇದೆ. ಅದು ಬರೀ ಹುಲಿಯಲ್ಲ. ರಾಜಾಹುಲಿ.. ಇಷ್ಟು ದಿನ ಅಜ್ಞಾತವಾಸದಲ್ಲಿದ್ದ ಈ ಹುಲಿ ಮತ್ತೆ ಬೇಟೆಗೆ ಹೊರಟು ನಿಂತಿದೆ. ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿ ನಿಂತಿದ್ದಾರೆ. ಹಸ್ತಶಿಕಾರಿಗೆ ಧವಳಗಿರಿ ವ್ಯೂಹ ಹೆಣೆದಿರೋ ಬಿಎಸ್‌ವೈ(BSY) ಮುಂದಿನ ಬುಧವಾರದಿಂದ್ಲೇ ಅಖಾಡಕ್ಕೆ ಇಳಿಯಲಿದ್ದಾರೆ. ಅಷ್ಟಕ್ಕೂ ರಾಜಕೀಯವಾಗಿ ತೆರೆಮರೆಗೆ ಸರಿದಿದ್ದ ಯಡಿಯೂರಪ್ಪನವರು ಮತ್ತೆ ರಣರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ನಾಯಕನಿಲ್ಲದ ರಾಜ್ಯ ಬಿಜೆಪಿಯನ್ನು(BJp) ಕಾಂಗ್ರೆಸ್ ನಾಯಕರು ಪ್ರತಿದಿನ ಈ ರೀತಿ ಕಿಚಾಯಿಸ್ತಾ ಇದ್ದಾರೆ. ತಾಕತ್ತಿದ್ರೆ ಒಬ್ಬ ನಾಯಕನನ್ನು ತಂದು ಮುಂದೆ ನಿಲ್ಲಿಸಿ ಅಂತ ಸವಾಲ್ ಹಾಕ್ತಿದ್ದಾರೆ. ಹಾಗಂತ ಕಾಂಗ್ರೆಸ್ ಸರ್ಕಾರವನ್ನು ಎದುರಿಸಿ ನಿಲ್ಲಬಲ್ಲ ನಾಯಕರು ಕರ್ನಾಟಕ ಬಿಜೆಪಿ ಪಾಳೆಯದಲ್ಲಿ ಇಲ್ವೇ ಇಲ್ಲ ಅಂತೇನಿಲ್ಲ. ಇದ್ದಾರೆ.. ಆದ್ರೆ ಇರೋ ಯಾವ ನಾಯಕನನ್ನೂ ಅಂಥಾ ಖದರ್ ಇಲ್ಲ, ಮಾಸ್ ಇಮೇಜ್ ಇಲ್ಲ. ಅಂಥದ್ದೇನಾದ್ರೂ ಶಕ್ತಿ ಇದ್ರೆ ಅದು ಹಳೇ ಹುಲಿ ಯಡಿಯೂರಪ್ಪನವರಿಗೆ(Yediyurappa) ಮಾತ್ರ. ಹೀಗಾಗಿ ರಾಜ್ಯ ಬಿಜೆಪಿ ಮತ್ತೆ ಬಿಎಸ್‌ವೈಗೆ ಜೈ ಅಂತಾ ಇದೆ. ಬಿಜೆಪಿ ಶಾಸಕರಂತೂ "ನೀವೇ ನಮಗೆ ದಿಕ್ಕು" ಅಂತ ರಾಜಾಹುಲಿಗೆ ಮೊರೆ ಇಟ್ಟಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಧವಳಗಿರಿ ನಿವಾಸದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ನಾಯಕರ ರಹಸ್ಯ ಸಭೆಯೂ ನಡೆದಿದೆ. ಸಭೆಯ ನಂತರ ಮಾತನಾಡಿದ ಬಿಎಸ್ವೈ ಕೈ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಗುತ್ತಿಗೆದಾರರ ಗುದ್ದಾಟಕ್ಕೆ ಟ್ವಿಸ್ಟ್: ಕಾಮಗಾರಿ ಮಾಡದೇ ಸಹಿ ಮಾಡಿದ್ರಾ 19 ಗುತ್ತಿಗೆದಾರರು?