ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವುದನ್ನು ನೋಡಲು ಹೇಳಿ: ವಿ.ಎಸ್‌. ಉಗ್ರಪ್ಪ

Jul 24, 2023, 3:37 PM IST

ಬಳ್ಳಾರಿ: ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಹೇಳಿಕೆ ವಿಚಾರವಾಗಿ ಕಾಂಗ್ರೆಸ್‌ ನಾಯಕ ವಿ.ಎಸ್‌. ಉಗ್ರಪ್ಪ(VS Ugrappa) ಮಾತನಾಡಿದರು. ಇದು ಕೇವಲ ರಾಜ್ಯದ ವಿಚಾರವಲ್ಲ . ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ ಮಾಹಿತಿ ಪಡೆದು ಉತ್ತರ ಕೊಡ್ತೇನೆ ಎಂದು ಹೇಳಿದರು. ಪಕ್ಷದ ಹಿತಾಸಕ್ತಿ ನಮಗೆ ಮುಖ್ಯ. ಹರಿಪ್ರಸಾದ್ ವಿಚಾರದಲ್ಲಿ ವಿರೋಧ ಪಕ್ಷದವರು ಟೀಕೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರ ತಟ್ಟೆಯಲ್ಲಿ ಏನು ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಲಿ. ಸರ್ಕಾರ ಟೆಕಾಫ್ ಅಗಿಲ್ಲವಾದ್ರೇ ಇಷ್ಟೊಂದು ಯೋಜನೆ ಜನರಿಗೆ ನೀಡ್ತಿದ್ದೇವಾ..?. ಮಂತ್ರಿ ಮಂಡಲ ಮಾಡಲು ಯಡಿಯೂರಪ್ಪ ಎಷ್ಟು ದಿನ ತೆಗೆದುಕೊಂಡಿದ್ರು. ಬಿಜೆಪಿಯವರು (BJP) ರಾಜ್ಯದ ಅರ್ಥಿಕ ಪರಿಸ್ಥಿತಿ ಹಾಳು ಮಾಡಿ ಹೋಗಿದ್ದಾರೆ. ಆರ್ಥಿಕ ಸ್ಥಿತಿ ಸರಿ ಮಾಡಿ ಸಂಪನ್ಮೂಲಗಳ  ಕ್ರೂಢಿಕರಿಸಿ ರಾಜ್ಯದ ಅಭಿವೃದ್ಧಿ ಮಾಡಬೇಕು. ಶಿಸ್ತಿನ ಪಕ್ಷ ಅಂತಾರೆ.. ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗಲಿಲ್ಲ. ಪರಿಷತ್ತಿನಲ್ಲಿ ವಿಧಾನ ಸಭೆಯಲ್ಲಿಯೂ ವಿರೋಧ ಪಕ್ಷದ ನಾಯಕರಿಲ್ಲ. ನಮ್ಮ ಬಗ್ಗೆ ಮಾತನಾಡೋದು ಬಿಟ್ಟು ಮೊದಲು ಅವರ ಕೆಲಸ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ಬಳ್ಳಾರಿ ಲೋಕಸಭೆ ಅಭ್ಯರ್ಥಿಯಾಗಿ(Loksabha) ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಸಹಜವಾಗಿ ಪೈಪೋಟಿ ಇರುತ್ತದೆ. ಆದ್ರೆ ಕಳೆರಡು ಬಾರಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿದ್ದೇನೆ ಈ ಬಾರಿಯೂ ಸ್ಪರ್ಧೆ ಮಾಡ್ತೇನೆ ಎಂದು ಹೇಳಿದರು.

ಇದನ್ನೂ ವೀಕ್ಷಿಸಿ:  ಕುಂದಾಪ್ರ ಕನ್ನಡ ಹಬ್ಬ: ಕಾಂತಾರದ ಲೇ..ಲೇ..ಹಾಡು ಹಾಡಿದ ಜಗದೀಶ್‌