14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ: 247 ಅಭ್ಯರ್ಥಿಗಳು..2.88 ಕೋಟಿ ಮತದಾರರು

Apr 26, 2024, 11:26 AM IST

ಮೊದಲ ಹಂತದ ಚುನಾವಣೆಯಲ್ಲಿ(Lok Sabha Elections 2024) ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2 ಕೋಟಿ 88 ಲಕ್ಷ ಮತದಾರರು(Voters) ತಮ್ಮ ಹಕ್ಕು ಚಲಾಯಿಸಲು ಸನ್ನದ್ಧರಾಗಿದ್ದಾರೆ. 30 ಸಾವಿರದ 602 ಮತಗಟ್ಟೆಗಳು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಮೊದಲ ಹಂತದ ಮತದಾನದಲ್ಲಿ ಹಲವು ಹೈವೋಲ್ಟೇಜ್ ಕಣಗಳಿದ್ದು, 14 ಕ್ಷೇತ್ರಗಳಲ್ಲೂ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. 14 ಕ್ಷೇತ್ರಗಳಲ್ಲಿ ಚುನಾವಣಾ ಭದ್ರತೆಗೆಂದು 50 ಸಾವಿರ ಪೊಲೀಸರನ್ನು(Police) ನಿಯೋಜಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ 65 ಅರೆಸೇನಾ ಪಡೆ ಬೀಡುಬಿಟ್ಟಿದೆ. 20 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟಾರೆ 19 ಸಾವಿರದ 701 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 14 ಕ್ಷೇತ್ರಗಳ ಭದ್ರತೆಯೇ ಒಂದೆಡೆಯಾದ್ರೆ.. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಭದ್ರತೆ ಬೇರೆ ಲೆವಲ್‌ನಲ್ಲೇ ಇದೆ. ಸಂಸದ ಡಿ.ಕೆ.ಸುರೇಶ್ ಮತ್ತು ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿರುವ ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕಣವಾಗಿದ್ದು, ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಇದೊಂದೇ ಕ್ಷೇತ್ರದಲ್ಲಿ 7 ಅರೆಸೇನಾಪಡೆ ನಿಯೋಜಿಸಿದ್ದು, ಎಲ್ಲ ಮತಗಟ್ಟೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಇದನ್ನೂ ವೀಕ್ಷಿಸಿ:  Thalaivar 171 Teaser: ಕಿಕ್ ಕೊಡುತ್ತಿದೆ ಸೂಪರ್ ಸ್ಟಾರ್ 'ಕೂಲಿ' ಖದರ್! ಟೀಸರ್‌ನಲ್ಲೇ ಫ್ಯಾನ್ಸ್ ಜೋಶ್ ಹೆಚ್ಚಿಸಿದ ರಜನಿ..!