Dec 18, 2023, 12:08 PM IST
ಪಂಚರಾಜ್ಯ ಚುನಾವಣೆ ಬಳಿಕ ಇದೀಗ ಲೋಕಸಭೆ ಎಲೆಕ್ಷನ್(Loksabha election) ಫೀವರ್ ಶುರುವಾಗಿದೆ. ಪರೋಕ್ಷವಾಗಿ ನಾನೂ ಅಭ್ಯರ್ಥಿ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಹೇಳಿದಂತೆ ಕಾಣುತ್ತಿದೆ. ಅನಂತಕುಮಾರ್ ಹೆಗಡೆ ನಿರ್ಧಾರದ ಮೇಲೆ ಕಾಗೇರಿ ಭವಿಷ್ಯ ನಿಂತಿದೆ. ಸ್ಪರ್ಧಿಸಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿರುವ ಅನಂತ್ ಕುಮಾರ್(Anantkumar Hegde) ಹೇಳಿಕೊಂಡಿದ್ದಾರೆ. ಅನಂತ ಕುಮಾರ್ ಹೆಗಡೆ ತೀರ್ಮಾನದತ್ತ ಆಕಾಂಕ್ಷಿಗಳ ಚಿತ್ತ ಇದೆ. ವಿಧಾನಸಭಾ ಸೋಲಿನ ಬಳಿಕ ಕಾಗೇರಿ ಆ್ಯಕ್ಟಿವ್ ಆಗಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರ ಹೊರತಾಗಿ ಜಿಲ್ಲೆಯಾದಯಂತ ಆ್ಯಕ್ಟಿವ್ ಆಗಿದ್ದಾರೆ. ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಕಾಗೇರಿ ಭಾಗಿಯಾಗ್ತಿದ್ದಾರೆ. ನಾನು ನನ್ನ ವಿಚಾರ ಎಲ್ಲಿ ಪ್ರಸ್ತಾಪ ಮಾಡಬೇಕೋ ಅಲ್ಲಿ ಹೇಳಿದ್ದೇನೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಕಾಗೇರಿ ಹೇಳಿದ್ದಾರೆ. ಕಾಗೇರಿ ಜೊತೆಗೆ ಬಿಜೆಪಿಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ ಹಲವರು. ಮಾಜಿ ಶಾಸಕಿ ರೂಪಾಲಿ ನಾಯ್ಕ್, ಆನಂದ್ ಆಸ್ನೋಟಿಕರ್, ಶಶಿ ಭೂಷಣ್ ಹೆಗ್ಡೆ, ಉದ್ಯಮಿ ಅನಂತಮೂರ್ತಿ ಹೆಗಡೆ ರೇಸ್‌ನಲ್ಲಿ ಇದ್ದಾರೆ.
ಇದನ್ನೂ ವೀಕ್ಷಿಸಿ: ಅಹಿಂದ ದಾಳ ಬಳಕೆಗೆ ಮುಂದಾದ್ರಾ ಸಿಎಂ ? ಒಕ್ಕಲಿಗ, ಲಿಂಗಾಯತರ ವಿರುದ್ಧ ಅಹಿಂದ ಕೌಂಟರ್ !