ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ: ಕಾಂಗ್ರೆಸ್ ಪಾಳಯದಲ್ಲಿ ಆಕಾಂಕ್ಷಿಗಳಿಂದ ತೀವ್ರ ಲಾಬಿ!

May 23, 2024, 11:10 AM IST

ವಿಧಾನಸಭೆಯಿಂದ ಮೇಲ್ಮನೆಯ(Vidhan Parishad) 11 ಸ್ಥಾನಗಳಿಗೆ ಎಲೆಕ್ಷನ್ ಘೋಷಣೆ ಆಗಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಆಕಾಂಕ್ಷಿಗಳಿಂದ ತೀವ್ರ ಲಾಬಿ  ನಡೆಯುತ್ತಿದೆ. ಕಾಂಗ್ರೆಸ್ ಪಾಲಿಗೆ ಸಿಗುವ 7 ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌‌ಗೆ 7 ಸ್ಥಾನ ಲಭ್ಯ ಆಗಲಿದೆ ಎನ್ನಲಾಗಿದ್ದು, ಈ ನಡುವೆ ಆಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್(DCM DK Shivakumar) ಹಿಂದೆ ಬಿದ್ದಿದ್ದಾರೆ. 7 ಸ್ಥಾನದ ಪೈಕಿ ಮೂವರ ಹೆಸರು ಬಹುತೇಕ ಫೈನಲ್ ಆಗುವ ಸಾಧ್ಯತೆ ಇದ್ದು, ಸಚಿವ ಎನ್.ಎಸ್ ಬೋಸರಾಜು, ಕೆ.ಗೋವಿಂದರಾಜು ಪುನಾರಾಯ್ಕೆ ಖಚಿತವಾಗಿದೆ. ಪ್ರಮುಖವಾಗಿ ಯತೀಂದ್ರ ಸಿದ್ದರಾಮಯ್ಯ ಮೇಲ್ಮನೆಗೆ ಆಯ್ಕೆಗೆ ಹೆಸರು ಕೇಳಿಬಂದಿದ್ದು, ಇನ್ನುಳಿದ ನಾಲ್ಕು ಸ್ಥಾನಕ್ಕೆ ಡಜನ್‌ಗೂ ಅಧಿಕ ಆಕಾಂಕ್ಷಿಗಳು ತಾಮುಂದು ನಾಮುಂದು ಎಂದು ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ವೀಕ್ಷಿಸಿ:  Vidhana Parishad: ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದೇನು..? ಕೇಂದ್ರದ ನಾಯಕರತ್ತ ಪರಿಷತ್ ಸ್ಥಾನದ ಆಕಾಂಕ್ಷಿಗಳ ಚಿತ್ತ..!