ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಪಡೆಗೆ ಮುಖಭಂಗ: ಬಿಜೆಪಿ ಬೆಂಬಲಿತ ಸದಸ್ಯನಿಂದಲೇ ಎಸ್‌ಡಿಪಿಐಗೆ ಸಾಥ್ !

ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಪಡೆಗೆ ಮುಖಭಂಗ: ಬಿಜೆಪಿ ಬೆಂಬಲಿತ ಸದಸ್ಯನಿಂದಲೇ ಎಸ್‌ಡಿಪಿಐಗೆ ಸಾಥ್ !

Published : Aug 11, 2023, 11:31 AM IST

ಎಸ್‌ಡಿಪಿಐ ಜೊತೆ ಕೇಸರಿ ಪಡೆ ಬಿಜೆಪಿ ಪ್ರತೀ ಬಾರಿ ಮುಗಿ ಬೀಳ್ತಾನೆ ಇದೆ. ಕಾರ್ಯಕರ್ತರ ಹತ್ಯೆ ವಿಚಾರದಲ್ಲೂ ಎಸ್‌ಡಿಪಿಐ ಮೇಲೆ ನಿರಂತರ ಆರೋಪಗಳಿವೆ.‌ ಆದರೆ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಎಸ್‌ಡಿಪಿಐಗೆ ಸಾಥ್ ನೀಡಿದ್ದಾರೆ. ಈ ಮೂಲಕ ಮಂಗಳೂರಿನ ತಲಪಾಡಿ ಗ್ರಾ.ಪಂ ಎಸ್ಡಿಪಿಐ ತೆಕ್ಕೆಗೆ ಜಾರಿದೆ. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ(BJP) ಭಾರೀ ಮುಖಭಂವಾಗಿವೆ. ಧರ್ಮ ದಂಗಲ್ ಮತ್ತು ಹಿಂದೂ ಸಂಘಟನೆ ವರ್ಸಸ್ ಬಿಜೆಪಿ ಫೈಟ್ ಮಧ್ಯೆ ಕಾಂಗ್ರೆಸ್(Congress) ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತ್ತು. ಈಗ ಗ್ರಾಮ ಪಂಚಾಯತ್(Gram Panchayat) ಚುನಾವಣೆಯಲ್ಲೂ ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿ ಹೆಚ್ಚು ಸದಸ್ಯ ಬಲ ಹೊಂದಿದ್ದ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್ಡಿಪಿಐ(SDPI) ಪಾಲಾಗಿದೆ.ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮತ್ತೆ ಅಧ್ಯಕ್ಷಗಾದಿ ಚುನಾವಣೆ ನಡೀತಾ ಇದೆ. ಅದರಂತೆ‌ ದ.ಕ ಜಿಲ್ಲೆಯಲ್ಲೂ ಹಲವು ಪಂಚಾಯತ್‌ಗಳ ಆಡಳಿತಕ್ಕಾಗಿ ಸೆಣಸಾಟ‌‌ ನಡೀತಾ ಇದ್ದು, ತಲಪಾಡಿ ಗ್ರಾ.ಪಂ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಅದರಲ್ಲೀ ಎಸ್ಡಿಪಿಐಗೆ ಬಿಜೆಪಿ ಬೆಂಬಲಿತ ಸದಸ್ಯರೇ ಸಾಥ್ ಕೊಡುವ ಮೂಲಕ ತಲಪಾಡಿ ಗ್ರಾ.ಪಂ ಆಡಳಿತ ಎಸ್ಡಿಪಿಐ ತೆಕ್ಕೆಗೆ ಜಾರಿದೆ.‌ ದಕ್ಷಿಣ ಕನ್ನಡ(Dakshina kannada) ಜಿಲ್ಲೆ ಉಳ್ಳಾಲ ತಾಲೂಕಿನ ತಲಪಾಡಿ‌ ಗ್ರಾಮ ಪಂಚಾಯತ್‌ನಲ್ಲಿ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಚುನಾವಣೆ ನಡೆಯಿತು. 

ಇದನ್ನೂ ವೀಕ್ಷಿಸಿ:  20 ಸಾವಿರ ಕೊಟ್ರೆ ದಾಖಲೆಯಿಲ್ಲದೆ ಭಾರತಕ್ಕೆ ಎಂಟ್ರಿ: ಶಂಕಿತನೊಬ್ಬನ‌ ವಿಚಾರಣೆಯಲ್ಲಿ ಎನ್ಐಎಗೆ ಸ್ಪೋಟಕ‌ ಮಾಹಿತಿ !

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more