ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ!
ಹೊಸದೊಂದು ಪರ್ವಕ್ಕೆ `ಮಹಾ' ಸಾಕ್ಷಿ!
ಪವಾರ್ VS ಪವಾರ್ ಸಮರ ಗೆದ್ದಿದ್ಯಾರು..?
ಇದು ಬಿಜೆಪಿಯ ಘಟಾನುಘಟಿ ನಾಯಕರಿಬ್ಬರ ಘೋಷವಾಕ್ಯ. ಫ್ಯಾಮಿಲಿ ಪಾಲಿಟಿಕ್ಸ್ನಿಂದ, ಕುಟುಂಬ ರಾಜಕಾರಣದಿಂದ, ರಾಜ್ಯಗಳು ಹಿಂದುಳಿತ ಇದ್ದಾವೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಹಾಗಾಗಿದೆ ಅಂತ ಹೋದಲ್ಲೆಲ್ಲಾ ಬಿಜೆಪಿ (BJP) ಹೇಳ್ತಲೇ ಇದೆ. ಮಹಾರಾಷ್ಟ್ರದ ರಾಜಕಾರಣದಲ್ಲಿ ಹಿಂದೆಂದೂ ಆಗದೇ ಇದ್ದ ಘಟನೆಯೊಂದು ಘಟಿಸ್ತಾ ಇದೆ. ಈ ಹಿಂದೆ, ಶಿವಸೇನೆ ಪಕ್ಷವೇ ಛಿದ್ರವಾಗಿ, ಅದರದೊಂದು ಮಹಾಭಾಗವೇ ಬಿಜೆಪಿಯ ಕಮಲದಲ್ಲಿ ಕೂತು, ಕಿಲಕಿಲ ಅಂತ ನಕ್ಕಿತ್ತು. ಅದರ ಫಲವಾಗಿ, ಬಿಜೆಪಿಗೆ ಮಹಾರಾಷ್ಟ್ರ ಸರ್ಕಾರದ ಭಾಗವಾಗೋ ಸೌಭಾಗ್ಯ ಒದಗಿತ್ತು. ಆದ್ರೆ ಈಗ ಅದೇ ಬಿಜೆಪಿಗೆ, ಅದೇ ಬಿಜೆಪಿ- ಶಿಂಧೆ ಸರ್ಕಾರಕ್ಕೆ ದೊಡ್ಡ ಮಟ್ಟದ ಪವರ್ ದೊರೆತಿದೆ. ಆ ಪವರ್ ತಂದುಕೊಡ್ತಾ ಇರೋದು, ಅಜಿತ್ ದಾದಾ ಪವಾರ್. ಇಡೀ ದೇಶದಲ್ಲೋ ಸಂಚಲನ ಸೃಷ್ಟಿಸಿರೋ ಹೆಸರು ಇದು. ಅದರಲ್ಲೂ ಮುಖ್ಯವಾಗಿ, ಶರದ್ ಪವಾರ್ (Sharad Pawar) ಅನ್ನೋ ರಾಜಕೀಯ ಚಾಣಾಕ್ಷನ ಪಕ್ಷದ ಬುಡದಲ್ಲಿ ಸುನಾಮಿ ಸೃಷ್ಟಿಸಿರೋ ಹೆಸರು.. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೇ (NCP party) ಮಹಾಕಂಟಕ ತಂದಿರೋ ವ್ಯಕ್ತಿಯೇ ಈ ಅಜಿತ್ ಪವಾರ್ (Ajit Pawar).
ಇದನ್ನೂ ವೀಕ್ಷಿಸಿ: ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?