May 7, 2022, 6:07 PM IST
ಬೆಂಗಳೂರು, (ಮೇ.07): ಚುನಾವಣಾ ವರ್ಷದಲ್ಲಿ ಭ್ರಷ್ಟಾಚಾರ, ಅಕ್ರಮ ನೇಮಕಾತಿ ವಿಚಾರದಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ತಿರುಗಿ ಬೀಳುತ್ತಿದ್ದರೆ, ಬಿಜೆಪಿ ಸೈಲೆಂಟಾಗಿ ಬೇರೆ ಪಕ್ಷದ ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.ಅದರಲ್ಲೂ ಬಿಜೆಪಿಯ ಪಾಲಿಗೆ ಇದುವರೆಗೂ ಮರೀಚಿಕೆಯಾಗೇ ಉಳಿದಿರುವ ಹಳೆ ಮೈಸೂರು ಭಾಗದಲ್ಲಿ ಮತಬೇಟೆಗಾಗಿ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದು, ಯುವಶಕ್ತಿಗೆ ಮಣೆ ಹಾಕುತ್ತಿದೆ.
ಮಂಡ್ಯದಲ್ಲಿ ಕಮಲಕ್ಕೆ ಸಿಕ್ತು ಯುವಶಕ್ತಿ, ಜೆಡಿಎಸ್‌ನ ಯುವನಾಯಕರು ಬಿಜೆಪಿ ಸೇರ್ಪಡೆ
ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಖುದ್ದು ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದು ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲ್ಯಾನಿಂಗ್ ನಡೆಸುತ್ತಿರುವ ಬೊಮ್ಮಾಯಿ ಒಂದಿಷ್ಟು ಜನರ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿದ್ದಾರೆ.