vuukle one pixel image

Mandya: ರಣ ರಣ ಮಂಡ್ಯದಲ್ಲಿ ಕಾಂಗ್ರೆಸ್ v/s ಮೈತ್ರಿ ಫೈಟ್..! ಸ್ಟಾರ್ ಚಂದ್ರು ಸ್ಟಾರ್ ಬದಲಿಸ್ತಾರಾ ಮಂಡ್ಯ ಮತದಾರ..?

Bindushree N  | Updated: Apr 17, 2024, 10:42 AM IST

ಮಂಡ್ಯ ರಣಕಣ ರಂಗೇರ್ತಿದೆ. ಮಂಡ್ಯ(Mandya) ಮಹಾಯುದ್ಧದಲ್ಲಿ ಜೆಡಿಎಸ್‌(JDS) ಬಿಜೆಪಿ(BJP) ಮೈತ್ರಿ ಎದುರಿಸಲು ಕಾಂಗ್ರೆಸ್(Congress) ಸಜ್ಜಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಗೆ(HD Kumaraswamy) ಪ್ರತಿಸ್ಪರ್ಧಿಯಾಗಿ ವೆಂಕರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು(Star Chandru) ಕಣದಲ್ಲಿದ್ದಾರೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಹಳ್ಳಿ ಹಳ್ಳಿಗಳಿಗೆ ತೆರಳಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಮಹಿಳೆಯರು ಆರತಿ ಮಾಡಿ ಕಳಶ ಹೊತ್ತು ಸ್ಟಾರ್ ಚಂದ್ರುರನ್ನ ಸ್ವಾಗತಿಸ್ತಿದ್ದಾರೆ. ಪ್ರಚಾರದ ವೇಳೆ ಸಿಗುತ್ತಿರುವ ಜನ ಬೆಂಬಲ ಸ್ಟಾರ್ ಚಂದ್ರು ಅವ್ರಿಗೆ ಮತ್ತಷ್ಟು ಹುಮ್ಮಸ್ಸು ತಂದು ಕೊಡ್ತಿದೆ.

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಅದ್ರಲ್ಲೂ ರಾಜಕೀಯಕ್ಕೆ ಹೆಸರಾದ ಹಾಗೂ ಹೈಹೋಲ್ಟೇಜ್ ರಣಕಣ ಅಂದ್ರೆ ಅದು ಮಂಡ್ಯ. ಸದಾ ಅಚ್ಚರಿ ಫಲಿತಾಂಶದ ಮೂಲಕ ದೇಶ ಹಾಗೂ ರಾಜ್ಯದ ಗಮನಸೆಳೆದಿದೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಂತು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿತ್ತು. ಇಂಡಿಯಾ ಅಂದರೆ ಮಂಡ್ಯಾ ಅನ್ನೋ ಮಾತನ್ನ ಮತ್ತೆ ಸಾಬೀತು ಮಾಡಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಅಕ್ಷರಶಃ ರಣರಂಗವಾಗಿದೆ. ಅದ್ರಲ್ಲೂ ಎಚ್ಡಿಕೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಈ ಬಾರಿ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವ್ರನ್ನು ಕಣಕ್ಕಿಳಿಸಿದೆ.

ಇದನ್ನೂ ವೀಕ್ಷಿಸಿ:  Loksabha Eection 2024: ಪ್ರಧಾನಿ ವಿತ್ ಮಾಜಿ ಪ್ರಧಾನಿ..ಗೌಡರ ಕೋಟೆಯಲ್ಲಿ ಮೋದಿ ಮೇನಿಯಾ..!