ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅವರ ಅಭಿಮಾನಿಗಳು ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದಾವಣಗೆರೆ: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಅವರ ಅಭಿಮಾನಿಗಳು ದಾವಣಗೆರೆ ನಗರದ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದುರ್ಗಾಂಬಿಕಾ ದೇವಿಯ ಪಕ್ಕ ಸಿದ್ದರಾಮಯ್ಯ ಫೋಟೋ ಇಡಲಾಗಿತ್ತು. ಪೂಜೆ ಸಲ್ಲಿಸಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದಿದ್ದಾರೆ. ದಾವಣಗೆರೆ ಕುರುಬ ಸಮಾಜದಿಂದ ಸಿದ್ದರಾಮಯ್ಯ ಸಿಎಂ ಗದ್ದುಗೆ ಏರಲಿ ಎಂದು ಪೂಜೆ ಮಾಡಲಾಗಿದೆ. ಈ ಹಿಂದೆ ಉತ್ತಮ ಆಡಳಿತ ನಡೆಸಿದ್ದಾರೆ. ಆದ್ದರಿಂದ ಮೊದಲ ಅವಧಿ ಸಿದ್ದರಾಮಯ್ಯನವರೆ ಮುಖ್ಯಮಂತ್ರಿ ಆಗಲಿ, ಇಲ್ಲದಿದ್ದರೆ ಮುಂದಿನ ಭಾರಿ ಕುರುಬ ಸಮುದಾಯ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಿಂದ ಲಾಡು ತಂದ ಅಭಿಮಾನಿ !