ಸದನದ ಗೌರವಕ್ಕೆ ಧಕ್ಕೆ ತಂದಿತಾ ಬಿಜೆಪಿ ಹೈಕಮಾಂಡ್‌ ನಿರ್ಧಾರ ?: ವಿಪಕ್ಷ ನಾಯಕನಿಲ್ಲದೇ ಬಜೆಟ್‌ ಮಂಡನೆ ?

Jul 7, 2023, 9:56 AM IST

ಇಂದು ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರ 14ನೇ ಬಜೆಟ್‌ ಇದಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ 7ನೇ ಬಾರಿಗೆ ಬಜೆಟ್ (Budget)​ ಮಂಡನೆ ಮಾಡುತ್ತಿದ್ದಾರೆ. ಇದರ ನಡುವೆ ಬಿಜೆಪಿ (BJP) ಹೈಕಮಾಂಡ್‌ನ ನಿರ್ಧಾರ ಸದನದ ಗೌರವಕ್ಕೆ ಧಕ್ಕೆ ತರುವಂತದ್ದು ಆಗಿದೆ. ಇದೇ ಮೊದಲ ಬಾರಿಗೆ ವಿಪಕ್ಷ ನಾಯಕ ಇಲ್ಲದೇ ಬಜೆಟ್‌ ಮಂಡನೆಯಾಗಲಿದೆ. ಎರಡು ದಿನಗಳ ಹಿಂದೆಯೇ ವೀಕ್ಷಕರು ರಾಜ್ಯಕ್ಕೆ ಬಂದು ಹೋದರೂ, ಇನ್ನೂ ಪ್ರತಿಪಕ್ಷ ನಾಯಕನ (Opposition Leader) ಆಯ್ಕೆ ಮಾತ್ರ ಆಗಿಲ್ಲ. ಯಡಿಯೂರಪ್ಪ ಅವರು ಸಹ ಈ ವಿಷಯವಾಗಿ ದೆಹಲಿಗೆ ಹೋಗಿದ್ದರು. ಒಟ್ಟಿನಲ್ಲಿ ಈ ರೇಸ್‌ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ಇದ್ದಾರೆ.

ಇದನ್ನೂ ವೀಕ್ಷಿಸಿ:  ಬಜೆಟ್‌ ಮಂಡನೆಗೆ ಸಿಎಂ ಸಜ್ಜು: ಸಿದ್ದರಾಮಯ್ಯ ಎದುರು ಪಂಚ ಗ್ಯಾರಂಟಿ ಸವಾಲು !