ಕೈ ಸರ್ಕಾರದ ಭವಿಷ್ಯ ನಿರ್ಧರಿಸಲಿದ್ಯಾ ಲೋಕಸಭಾ ಚುನಾವಣೆ..?
2019ರ ಲೋಕಯುದ್ಧದ ಬೆನ್ನಲ್ಲೇ ಪತನಗೊಂಡಿತ್ತು ಮೈತ್ರಿ ಸರ್ಕಾರ..!
ಲೋಕಸಂಗ್ರಾಮದ ಹೊಸ್ತಿಲಲ್ಲೇ ಮತ್ತೆ ಸಿಡಿದ ಆಪರೇಷನ್ ಬಾಂಬ್..!
50 ಕೋಟಿಯ ಆಪರೇಷನ್ ಆಟ. ಇದು ಮುಖ್ಯಮಂತ್ರಿಗಳ ಕೋಟೆಯಿಂದಲೇ ನುಗ್ಗಿ ಬಂದಿರೋ ಆಪರೇಷನ್ ಸುನಾಮಿ. ಕಾಂಗ್ರೆಸ್(Congress) ಸರ್ಕಾರವನ್ನು ಕೆಡವಲು ತೆರೆಯ ಹಿಂದೆ ಆಪರೇಷನ್ ಆಟ ಶುರುವಾಗಿದ್ಯಂತೆ. ಕೈ ಶಾಸಕರಿಗೆ 50 ಕೋಟಿಯ ಬೆಲೆ ಕಟ್ಟಲಾಗ್ತಿದ್ಯಂತೆ. ಇಂಥದ್ದೊಂದು ಆರೋಪ ಮಾಡಿರೋದು ಬೇರಾರೂ ಅಲ್ಲ, ಸ್ವತಃ ರಾಜ್ಯದ ಮುಖ್ಯಮಂತ್ರಿ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗ್ತಿದ್ಯಂತೆ. ಇದನ್ನು ಯಾರೋ ಒಬ್ಬ ಶಾಸಕ ಹೇಳಿದ್ದಿದ್ರೆ ಅದು ಬೇರೆ ಮಾತು. ಆದ್ರೆ ಇಂತಹ ಒಂದು ಗಂಭೀರ ಆರೋಪ ಮಾಡಿರೋದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah). ಅತ್ತ ಬೆಂಗಳೂರಿನ(Bengaluru) ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿ ರಾಜಧಾನಿಯೇ ಬೆಚ್ಚಿ ಬಿದ್ದಿದ್ರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಡಿಸಿರೋ ಆಪರೇಷನ್ ಬಾಂಬ್'ಗೆ ರಾಜ್ಯ ರಾಜಕೀಯವೇ ಬೆಚ್ಚಿ ಬಿದ್ದಿದೆ. ಇಲ್ಲಿವರೆಗೆ ಕಾಂಗ್ರೆಸ್ ಶಾಸಕರು ಬಿಜೆಪಿ(Bjp) ವಿರುದ್ಧ ಆಪರೇಷನ್ ಆರೋಪ ಮಾಡ್ತಾ ಇದ್ರು. ಆದ್ರೆ ಇದೇ ಮೊದಲ ಬಾರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವ್ರೇ ಆಪರೇಷನ್ ಬಾಂಬ್ ಸಿಡಿಸಿದ್ದಾರೆ. ಅದೂ 50 ಕೋಟಿಯ ಆಪರೇಷನ್ ಬಾಂಬ್. ಹಿಮಾಚಲ ಪ್ರದೇಶದಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಅಡ್ಡ ಮತದಾನ ಮಾಡಿ, ಸರ್ಕಾರದ ಬುಡವನ್ನೇ ಅಲುಗಾಡಿಸಿದ ಬೆನ್ನಲ್ಲೇ, ಸಿದ್ದರಾಮಯ್ಯನವರು ರಾಜ್ಯದಲ್ಲೂ ಅಂಥದ್ದೇ ಆಪರೇಷನ್ ಪ್ರಯತ್ನ ನಡೀತಾ ಇದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಬಾಂಬ್ ಸ್ಫೋಟ ಪ್ರಕರಣ ಭೇದಿಸುತ್ತೇವೆ, ಆರೋಪಿಯನ್ನು ಅರೆಸ್ಟ್ ಮಾಡ್ತೇವೆ: ಗೃಹ ಸಚಿವ ಪರಮೇಶ್ವರ್