Shobha Karandlaje: ನಮ್ಮ ಪಕ್ಷದ ಕೆಲವರಿಂದಲೇ ಟಿಕೆಟ್‌ ತಪ್ಪಿಸಲು ಷಡ್ಯಂತ್ರ: ಶೋಭಾ ಕರಂದ್ಲಾಜೆ

Shobha Karandlaje: ನಮ್ಮ ಪಕ್ಷದ ಕೆಲವರಿಂದಲೇ ಟಿಕೆಟ್‌ ತಪ್ಪಿಸಲು ಷಡ್ಯಂತ್ರ: ಶೋಭಾ ಕರಂದ್ಲಾಜೆ

Published : Mar 09, 2024, 01:14 PM IST

ಪಕ್ಷದ ಅಥವಾ ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ನಮ್ಮ ಶ್ರಮ, ನಮ್ಮ ಕೆಲಸ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬೆಳಗಾವಿ: ನನಗೆ ಟಿಕೆಟ್ ತಪ್ಪಿಸಲು ಪಿತೂರಿ ನಡೆಯುತ್ತಿದೆ. ಯಾವಾಗ ವಿರೋಧ ವ್ಯಕ್ತವಾಗುತ್ತೋ ಆಗಲೇ ನಮ್ಮ ನಾಯಕರು ಮಾಹಿತಿ ಕಲೆ ಹಾಕ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಬೆಳಗಾವಿಯಲ್ಲಿ(Belagavi) ಹೇಳಿದ್ದಾರೆ. ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ‌ಕೆಲಸ ಮಾಡ್ತಿದ್ದಾರೆ,‌ ಪಕ್ಷ ಕೆಲಸ ಮಾಡುತ್ತಾರೆ ಎಂದಷ್ಟೇ ‌ಹೇಳ್ತಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಗೊತ್ತಾಗುತ್ತವೆ. ನಾವೇನು ಮಾಡಿಲ್ಲ, ಏನನ್ನು ಮಾಡಬಾರದು ಎಂಬುದು ಇಂಥ ವರದಿ ಪಡೆಯುವುದರಿಂದ ಗೊತ್ತಾಗುತ್ತದೆ. ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ. ಅದಕ್ಕಾಗಿ ನಮ್ಮ ಹೈಕಮಾಂಡ್‌ ಬಗ್ಗೆ ನನಗೆ ನಂಬಿಕೆಯಿದೆ, ಕೆಲಸದ ಆಧಾರದ ಮೇಲೆ ಟಿಕೆಟ್(Ticket) ಸಿಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ವೀಕ್ಷಿಸಿ:  ಟೈಮ್ಸ್‌ನೌ-ಇಟಿಜಿ ಜಂಟಿ ಸಮೀಕ್ಷೆ ಪ್ರಕಾರ ಯಾರಿಗೆಷ್ಟು ಸ್ಥಾನ ? ರಾಜ್ಯದಲ್ಲಿ ಕಾಂಗ್ರೆಸ್‌ ಎಷ್ಟು ಸೀಟು ಗೆಲ್ಲಲಿದೆ ?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more