ಡಿಕೆಶಿ ಹೇಳಿದ ಸೆಟ್ಲ್‌ಮೆಂಟ್‌ ಪಾಲಿಟಿಕ್ಸ್ ಇದೇನಾ..? ಹಾಲಿ-ಮಾಜಿ ಡಿಸಿಎಂ ಮಧ್ಯೆ ನಡೆದಿತ್ತು ರಣಭಯಂಕರ ಕಾಳಗ..!

Oct 1, 2023, 3:01 PM IST

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೆಟ್ಲ್'ಮೆಂಟ್ ಪಾಲಿಟಿಕ್ಸ್ ಬಗ್ಗೆ ಮಾತಾಡ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಕೂಡ ಅದೇ ಸೆಟ್ಲ್'ಮೆಂಟ್ ರಾಜಕೀಯದ ಬಗ್ಗೆ ಮಾತಾಡಿದ್ದಾರೆ. ನನ್ನ ತಂಟೆಗೆ ಬಂದವರ ಸೆಟ್ಲ್'ಮೆಂಟ್ ಆಗಿದೆ ಅಂತ ಡಿಕೆಶಿ ಹೇಳ್ತಿದ್ದಾರೆ. ಸೆಟ್ಲ್'ಮೆಂಟ್ ಮಾಡೋದಕ್ಕೆ ನಂಗೂ ಬರತ್ತೆ ಅಂತ ಈಶ್ವರಪ್ಪ ಸವಾಲ್ ಹಾಕ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸ್ತಿರೋದ್ರ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಈಶ್ವರಪ್ಪ, ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಅವ್ರನ್ನು ನೀರಿನ ಕಳ್ಳ ಅಂತ ಕರೆದು ಬಿಟ್ಟಿದ್ರು. ಆ ಹೊತ್ತಿಗೆ ದೆಹಲಿಯಲ್ಲಿದ್ದ ಡಿಕೆಶಿ ಕಿವಿಗೆ  ಇದು ಬೀಳ್ತಾ ಇದ್ದಂತೆ, ಉರಿದು ಬಿದ್ದ ಬಂಡೆ, ಸೆಟ್ಲ್'ಮೆಂಟ್ ಅನ್ನೋ ಪದ ಬಳಸಿ ಈಶ್ವರಪ್ಪಗೆ ತಿರುಗೇಟು ಕೊಟ್ಟಿದ್ರು. ಇದು ಡಿಕೆ ಶಿವಕುಮಾರ್ ಮತ್ತು ಈಶ್ವರಪ್ಪ ಮಧ್ಯೆ ಒಂದು ವಾರ ಹಿಂದೆ ನಡೆದಿದ್ದ ಸೆಟ್ಲ್'ಮೆಂಟ್ ಕಾಳಗ. ಅದಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈಶ್ವರಪ್ಪನವರ ಬುಡದಲ್ಲೇ ತನಿಖಾಸ್ತ್ರವೊಂದು ಎದ್ದು ನಿಂತಿದೆ. ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದ್ದು, ಕಾಂಗ್ರೆಸ್ ಸರ್ಕಾರ ಇದ್ರ ತನಿಖೆಗೆ ಮುಂದಾಗಿದೆ. ಸ್ವತಃ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸುವರ್ಣನ್ಯೂಸ್‌ಗೆ ಈ ಮಾಹಿತಿ ಸ್ಫೋಟಕ ನೀಡಿದ್ದಾರೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಿರೋ ಅವ್ಯವಹಾರವನ್ನು ತನಿಖೆಯ ಮೂಲಕ ಬಯಲಿಗೆಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. 

ಇದನ್ನೂ ವೀಕ್ಷಿಸಿ:  ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?