DVS ಮುಂದಿನ ನಡೆ ಏನು..? ಪಕ್ಷಕ್ಕಾಗಿ ದುಡಿಯುತ್ತಾರಾ? ಮುನಿಸಿಕೊಳ್ತಾರಾ?

Nov 10, 2023, 3:30 PM IST

ರಾಜ್ಯ ಬಿಜೆಪಿ ಹಿರಿಯ ನಾಯಕ, ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ಸ್ಪರ್ಧಿಸೋದಿಲ್ಲವೆಂದು ಡಿಸಿ ಸದಾನಂದಗೌಡ ಹೇಳಿದ್ದಾರೆ. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ, ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಮತ್ತು ಸದ್ಯ ಬಿಜೆಪಿ ಸಂಸದರಾಗಿರುವ, ಡಿ ವಿ ಸದಾನಂದ ಗೌಡ(DV Sadananda Gowda) ಅವ್ರು ಚುನಾವಣಾ ರಾಜಕೀಯಕ್ಕೆ(Electoral Politics) ನಿವೃತ್ತಿ ಘೋಷಿಸಿದ್ದಾರೆ. ಇನ್ನೇನು ಕಲವೇ ತಿಂಗಳಿನಲ್ಲಿ ಲೋಕಸಭೆ(Loksabha) ಎಲೆಕ್ಷನ್ ಬರಲಿದೆ. ಈ ಸಂದರ್ಭದಲ್ಲಿ ಹಾಲಿ ಸಂಸದರೊಬ್ಬರ ಚುನಾವಣಾ(Election) ನಿವೃತ್ತಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಸದಾನಂದ ಗೌಡ ಅವರು ರಾಜಕೀಯದಲ್ಲೇ 30 ವರ್ಷಗಳನ್ನು  ಕಳೆದಿದ್ದಾರೆ. ಈ ಮೂವತ್ತು ವರ್ಷಗಳ ಅವರ ರಾಜಕೀಯ ಜರ್ನಿಯಲ್ಲಿ ಹತ್ತು ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅದರ ನಂತರ 20 ವರ್ಷಗಳ ಕಾಲ ಸಂಸದರಾಗಿದ್ದ ಸದಾನಂದ ಗೌಡ ಅವರು, ಒಂದು ವರ್ಷ ಮುಖ್ಯಮಂತ್ರಿಯಾಗಿದ್ದರು. ಹಾಗೆನೇ ಒಟ್ಟು ಏಳು ವರ್ಷಗಳ ಕಾಲ ಮೋದಿ ಅವರೊಟ್ಟಿಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದರು ಡಿವಿಎಸ್ ಇದಕ್ಕೂ ಮೊದಲು ನಾಲ್ಕು ವರ್ಷಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಇದು ಅವರ 30 ವರ್ಷಗಳ ರಾಜಕೀಯ ಜರ್ನಿ. ಇದೆಲ್ಲವನ್ನು ಹೇಳಿಕೊಂಡಿರುವ ಡಿವಿಎಸ್, ಇಲ್ಲಿವರೆಗೂ ಪಕ್ಷಎಲ್ಲವನ್ನೂ ಕೊಟ್ಟಿದೆ. ಇನ್ನೇನಿದ್ರು ಪಕ್ಷಕ್ಕಾಗಿ ದುಡಿಯೋ ಕೆಲಸ ಮಾಡುವೆ ಎಂದು ಹೇಳಿದ್ದಾರೆ. ಹಾಗೆನೇ ಪಕ್ಷ ಎಲ್ಲವನ್ನೂ ಕೊಟ್ಟ ಮೇಲೆ ಇನ್ನೂ ಹೆಚ್ಚಿನದ್ದನ್ನು ಆಸೆ ಪಡಬಾರದು, ಆ ಕಾರಣಕ್ಕಾಗಿ ಬೇರೆಯವರಿಗೆ ಅವಕಾಶ ಸಿಗಲೆಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಡಿವಿಎಸ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಅವಳಿಗಾಗಿ ಅವನು ಕಳೆದುಕೊಂಡಿದ್ದು ಲಕ್ಷ ಲಕ್ಷ..! ಸಾಯೋದಕ್ಕೂ ಮೊದಲು ಹನಿಟ್ರ್ಯಾಪ್ ಕಥೆ ಹೇಳಿದ..!